ಜೋಗ ಜಲಪಾತಕ್ಕೆ ಇಳಿದಿದ್ದ ಜ್ಯೋತಿರಾಜ್ ನಾಪತ್ತೆ

Rock climber untraced after going down Jog Falls in search of youth
Highlights

ಜೋಗ ಜಲಪಾತದಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಶವವನ್ನು ಹುಡುಕಲು ನಿನ್ನೆ ಸಂಜೆ ಜೋಗ ಜಲಪಾತಕ್ಕೆ ಇಳಿದಿದ್ದ ಜ್ಯೋತಿರಾಜ್ ಅಲ್ಲಿಂದ ನಾಪತ್ತೆಯಾಗಿದ್ದಾರೆ.   

ಶಿವಮೊಗ್ಗ: ಜೋಗ ಜಲಪಾತದಲ್ಲಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಶವವನ್ನು ಹುಡುಕಲು ನಿನ್ನೆ ಸಂಜೆ ಜೋಗ ಜಲಪಾತಕ್ಕೆ ಇಳಿದಿದ್ದ ಜ್ಯೋತಿರಾಜ್ ಅಲ್ಲಿಂದ ನಾಪತ್ತೆಯಾಗಿದ್ದಾರೆ.   ಮಧ್ಯಾಹ್ನ 3 ಗಂಟೆ ವೇಳೆಗೆ ಜೋಗ ಜಲಪಾತಕ್ಕೆ ಇಳಿದಿದ್ದ ಜ್ಯೋತಿ ರಾಜ್ ಅಲ್ಲಿಂದ ಮೇಲೆ ಬಂದಿಲ್ಲ ಎನ್ನಲಾಗಿದೆ.

ನಿನ್ನೆ ಮಧ್ಯಾಹ್ನ ಮೂರು ಗಂಟೆಯ ನಂತರ ಜೋಗ ಜಲಪಾತಕ್ಕೆ ಇಳಿದಿದ್ದ ಜ್ಯೋತಿರಾಜ್ ಸುಳಿವಿಲ್ಲ. 5 ಗಂಟೆ ಸುಮಾರಿಗೆ ಆತ ಮೇಲೆ ಬರಬೇಕಿತ್ತು. ಆದರೆ ಆತ ಮೇಲೆ ಬಂದಿಲ್ಲ. ಅಲ್ಲಿಯೇ ಪೊಟರೆಯಲ್ಲಿ ಕುಳಿತಿರಬಹುದು. ಅಲ್ಲಿ ತುಂಬಾ ಶೀತವಿದ್ದು, ಇದರಿಂದ ಅಲ್ಲಿ ಕುಳಿತುಕೊಂಡಿರಬಹುದು ಎಂದು ಜ್ಯೋತಿರಾಜ್ ಸ್ನೇಹಿತ ಬಸವರಾಜು ಹೇಳಿದ್ದಾರೆ.

ಇನ್ನು ಅಲ್ಲಿ ಕಾಣೆಯಾಗಿರುವ ಅವರು ಆದಷ್ಟು ಬೇಗ ಪತ್ತೆಯಾಗಲಿ ಎಂದು ನಿಮ್ಮ ಹಾರೈಕೆ ಇರಲಿ.

 

loader