ನವದೆಹಲಿ[ಮೇ. 29]  ದೊಡ್ಡ ಕರುಳಿನಲ್ಲಿ ಗಡ್ಡೆ ಇದ್ದು ಇದಕ್ಕೆ ಟ್ರೀಟ್ ಮೆಂಟ್ ತೆಗೆದುಕೊಳ್ಳಲು ಇಂಗ್ಲೆಂಡ್ ಗೆ ತೆರಳಬೇಕಾಗಿದೆ ಹಾಗಾಗಿ ಪಾಸ್ ಪೋರ್ಟ್ ಮೇಲಿನ ನಿರ್ಬಂಧ ತೆಗೆದು ವಿದೇಶಕ್ಕೆ ತೆರಳಲು ಅವಕಾಶ ಮಾಡಿಕೊಡಬೇಕು ಎಂದು ರಾಬರ್ಟ್ ವಾದ್ರಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

ಹೆಚ್ಚಿನ ಆರೈಕೆಗಾಗಿ ಲಂಡನ್ ಗೆ ತೆರಳಬೇಕಿದ್ದು ಪಾಸ್ ಪೋರ್ಟ್ ಮೇಲಿನ ನಿರ್ಬಂಧ ತೆಗೆದು ಹಾಕಬೇಕು ಎಂದು ಕೇಳಿಕೊಂಡಿದ್ದಾರೆ. ದೆಹಲಿ ಗಂಗಾರಾಮ್ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಕೊಂಡಿರುವ ವಾದ್ರಾ ವಿದೇಶಕ್ಕೆ ತೆರಳಲು ಅನುಮತಿ ಕೇಳಿದ್ದಾರೆ. 

ವಾದ್ರಾ ಪರ ವಕೀಲರಾದ ಕೆಟಿಎಸ್ ತುಳಸಿ ವಾದ ಮುಂದಿಟ್ಟಿದ್ದು, ತನಿಖೆಗೆ ನಮ್ಮ ಕಕ್ಷಿದಾದರರು ಎಲ್ಲ ರೀತಿಯ ಸಹಕಾರ ನೀಡುತ್ತ ಬಂದಿದ್ದಾರೆ. ವಾದ್ರಾ ಇಂಗ್ಲೆಂಡಿನಿಂದ ವಾಪಸಾದ ಮೇಲೆಯೂ ಮುಂದಿನ ವಿಚಾರಣೆ ನಡೆಸಬಹುದು ಎಂದು ಹೇಳಿದ್ದಾರೆ. ಅಕ್ರಮ ಹಣ ವಹಿವಾಟು ಪ್ರಕರಣದಲ್ಲಿ ವಾದ್ರಾ ತನಿಖೆ ಎದುರಿಸುತ್ತಿದ್ದಾರೆ.