ನವದೆಹಲಿ (ಫೆ.15): ಪೋಲಿಸ್ ಕುದುರೆ ಶಕ್ತಿಮಾನ್ ನನ್ನು ಥಳಿಸಿದ ಉತ್ತರಖಂಡದ ಬಿಜೆಪಿ ಶಾಸಕನಿಗೆ ಟಿಕೆಟ್ ನೀಡಿದ್ದಕ್ಕಾಗಿ ರಾಬರ್ಟ್ ವಾದ್ರಾ ಬಿಜೆಪಿಗೆ ಛೀಮಾರಿ ಹಾಕಿದ್ದಾರೆ.

ನವದೆಹಲಿ (ಫೆ.15): ಪೋಲಿಸ್ ಕುದುರೆ ಶಕ್ತಿಮಾನ್ ನನ್ನು ಥಳಿಸಿದ ಉತ್ತರಖಂಡದ ಬಿಜೆಪಿ ಶಾಸಕನಿಗೆ ಟಿಕೆಟ್ ನೀಡಿದ್ದಕ್ಕಾಗಿ ರಾಬರ್ಟ್ ವಾದ್ರಾ ಬಿಜೆಪಿಗೆ ಛೀಮಾರಿ ಹಾಕಿದ್ದಾರೆ.

ಬಿಜೆಪಿ ಶಾಸಕ ಗಣೇಶ್ ಜೋಷಿಗೆ ಟಿಕೆಟ್ ನೀಡಿರುವುದು ನನಗೆ ದಿಗಿಲಾಗಿದೆ. ಇದೊಂದು ಸರಿಯಾದ ಆಯ್ಕೆಯಲ್ಲ ಎಂದು ವಾದ್ರಾ ಹೇಳಿದ್ದಾರೆ.

ಕಳೆದ ಮಾರ್ಚ್ ನಲ್ಲಿ 14 ವರ್ಷದ ಕುದುರೆ ಶಕ್ತಿಮಾನ್ ಗೆ ಬಿಜೆಪಿ ಶಾಸಕ ಗಣೇಶ್ ಜೋಷಿ ಥಳಿಸಿದ್ದರು. ಹಿಂಬದಿ ಕಾಲಿಗೆ ಬಲವಾಗಿ ಹೊಡೆತ ಬಿದ್ದು ಶಕ್ತಿಮಾನ್ ಅಸು ನೀಗಿತ್ತು.