ಪ್ರತಿಷ್ಟಿತ ಮಠದಲ್ಲಿ ದರೋಡೆ : ಕೇಜಿಗಟ್ಟಲೆ ಆಭರಣ ಕಳವು

First Published 19, Jan 2018, 10:23 AM IST
Robbery at Kalaburgi Math
Highlights

ಮಠದ ಶೆಟರ್ ಮುರಿದು ಹುಂಡಿಯನ್ನು ಕಳವು ಮಾಡಿ ನದಿಯಲ್ಲಿ ಬಿಸಾಕಿದ್ದಾರೆ.

ಕಲಬುರಗಿ(ಜ.19): ಸೇಡಂ ತಾಲೂಕಿನ ಮಳಖೇಡ ಗ್ರಾಮದ ಬಳಿಯ ಉತ್ತರಾಧಿ ಮಠದಲ್ಲಿ ದರೋಡೆ ನಡೆಸಿರುವ ಕಳ್ಳರು  30 ಕೆಜಿ ಬೆಳ್ಳಿ, ಹುಂಡಿಯಲ್ಲಿನ 5 ಲಕ್ಷ ರೂ ನಗದು ಸೇರಿದಂತೆ 18 ಲಕ್ಷಕ್ಕೂ ಅಧಿಕ ನಗನಾಣ್ಯ ದೋಚಿದ್ದಾರೆ.

ಮಠದ ಶೆಟರ್ ಮುರಿದು ಹುಂಡಿಯನ್ನು ಕಳವು ಮಾಡಿ ನದಿಯಲ್ಲಿ ಬಿಸಾಕಿದ್ದಾರೆ. ಕಳೆದ ಮೂರು ವರ್ಷಗಳ ಹಿಂದೆ ಇದೆ ಮಠದಲ್ಲಿ ದರೋಡೆಯಾಗಿತ್ತು ಆದರೆ ಇದುವರೆಗೆ ಆರೋಪಿಗಳು ಪತ್ತೆಯಾಗಿಲ್ಲ. ಸ್ಥಳಕ್ಕೆ ಮಳಖೇಡ ಠಾಣೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ.

loader