ವಿರೇಂದ್ರ ಅವರ ಸಹೋದರ ತಿಪ್ಪೇಸ್ವಾಮಿ ಮನೆಯಲ್ಲೂ 10 ಲಕ್ಷ ರೂ. ಕಳವಾಗಿದೆ.

ಚಳ್ಳೆಕೆರೆ(ಸೆ.12): ನಟ ದೊಡ್ಡಣ್ಣ ಅವರ ಅಳಿಯ ಹಾಗೂ ಉದ್ಯಮಿ ಕೆ.ಸಿ. ವಿರೇಂದ್ರ ಅವರ ಮನೆಯಲ್ಲಿ ಕಳ್ಳತನವಾಗಿದೆ.

ಚಳ್ಳೆಕೆರೆ ಪಟ್ಟಣದ ಹಳೇ ಟೌನಿನಲ್ಲಿರುವ ಮನೆಯಲ್ಲಿ 6.3 ಕೋಟಿ ರೂ. ಮೌಲ್ಯದ 21 ಚಿನ್ನದ ಗಟ್ಟಿಯನ್ನು ಕಳವು ಮಾಡಲಾಗಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ. ವಿರೇಂದ್ರ ಅವರ ಸಹೋದರ ತಿಪ್ಪೇಸ್ವಾಮಿ ಮನೆಯಲ್ಲೂ 10 ಲಕ್ಷ ರೂ. ಕಳವಾಗಿದೆ. ಚಳ್ಳೆಕೆರೆ ಠಾಣೆಯಲ್ಲಿ 2 ಪ್ರತ್ಯೇಕ ಪ್ರಕರಣ ದಾಖಲಾಗಿದ್ದು ಸ್ಥಳಕ್ಕೆ ಎಸ್ಪಿ ಶ್ರೀನಾಥ್ ಜೋಷಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮನೆಗೆಲಸ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.