ಭಾನುವಾರ ರಾತ್ರಿ ಬರೋಡ ಬ್ಯಾಂಕ್'ನಲ್ಲಿ ಈ ದರೋಡೆ ನಡೆದಿದ್ದು, ಬ್ಯಾಂಕ್ ಸಿಬ್ಬಂದಿ ಸೋಮವಾರ ಬ್ಯಾಂಕ್'ಗೆ ಆಗಮಿಸಿ ಲಾಕರ್'ಗಳ ಪರಿಶೀಲಿಸಿದಾಗ ಪ್ರಕರಣ ಬೆಳಕಿದೆ ಬಂದಿದೆ.
ಮುಂಬೈ(ನ.14):ಈ ಘಟನೆ ನಿಮಗೆ ಹಾಲಿವುಡ್ ಸಿನಿಮಾಗಳನ್ನು ನೆನಪಿಸುತ್ತದೆ. ವಾಣಿಜ್ಯ ರಾಜಧಾನಿ ನೇವಿ ಮುಂಬೈನಲ್ಲಿ 30 ಅಡಿ ಸುರಂಗ ಕೊರೆದು ಒಳನುಗ್ಗಿರುವ ದರೋಡೆಕೋರರು 30 ಲಾಕರ್'ಗಳಲ್ಲಿದ್ದ 6 ಕೋಟಿಗೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ದೋಚಿದ್ದಾರೆ.
ಭಾನುವಾರ ರಾತ್ರಿ ಬರೋಡ ಬ್ಯಾಂಕ್'ನಲ್ಲಿ ಈ ದರೋಡೆ ನಡೆದಿದ್ದು, ಬ್ಯಾಂಕ್ ಸಿಬ್ಬಂದಿ ಸೋಮವಾರ ಬ್ಯಾಂಕ್'ಗೆ ಆಗಮಿಸಿ ಲಾಕರ್'ಗಳ ಪರಿಶೀಲಿಸಿದಾಗ ಪ್ರಕರಣ ಬೆಳಕಿದೆ ಬಂದಿದೆ. ಲಾಕರ್ ಬಳಿ ಗುಂಡಿ ಪತ್ತೆಯಾಗಿದ್ದು ಗುಂಡಿಯನ್ನು ಪರಿಶೀಲನೆಗೊಳಪಡಿಸಿದಾಗ 30 ಅಡಿ ಸುರಂಗ ಬ್ಯಾಂಕ್ ಹತ್ತಿರದಲ್ಲೇ ಇರುವ ದಿನಸಿ ಅಂಗಡಿಗೆ ಸಂಪರ್ಕ ಕಲ್ಪಿಸಿದೆ.
ದರೋಡೆಕೋರರು ದಿನಸಿ ಅಂಗಡಿಯಿಂದ ಸುರಂಗ ಕೊರೆದಿರುವ ಸಾಧ್ಯತೆಯಿದೆ. 2 ಅಡಿ ಅಗಲವಿರುವ ಸುರಂಗ ಒಬ್ಬ ಮನುಷ್ಯ ನುಸುಳಿಹೋಗಬಹುದಾಗಿದೆ. ಬ್ಯಾಂಕ್ ಲೂಟಿಯಾದ ದಿನದಿಂದ ದಿನಸಿ ಅಂಗಡಿ ಮಾಲೀಕ ನಾಪತ್ತೆಯಾಗಿದ್ದಾನೆ. ಮೂಲತಃ ಜಾರ್ಖಂಡ್ ರಾಜ್ಯದವನಾದ ಈತ ಕೆಲವು ತಿಂಗಳ ಹಿಂದೆ ಮಳಿಗೆಯನ್ನು ಬಾಡಿಗೆ ಪಡೆದು ದಿನಸಿ ಅಂಗಡಿ ತೆರೆದಿದ್ದ. ಆದರೆ ಇದು ಈತನ ಕೃತ್ಯವೇ ಅಥವಾ ಬೇರೆಯವರು ಇದರಲ್ಲಿ ಭಾಗಿಯಾಗಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ಚುರುಕುಗೊಳಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.
