ನೆಲಮಂಗಲ ಹಾಗೂ ಪೀಣ್ಯದಲ್ಲಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ತೆರಳಿದ್ದರು.
ಬೆಂಗಳೂರು(ಫೆ.11): ದರೋಡೆಕೋರರು ದೊಡ್ಡಬಳ್ಳಾಪುರ ಪಿಎಸ್ಐ ಯಶವಂತ್ ಅವರ ಕೊಲೆಗೆ ಯತ್ನಸಿದ ಘಟನೆ ವಿಶ್ವನಾಥಪುರದ ನ್ಯೂ ಹೊಸೂರು ಬಳಿ ನಡೆದಿದೆ. ಯಶವಂತ್ ಅವರು ತಮ್ಮ ತಂಡದೊಂದಿಗೆ ಇಂದು ಆರೋಪಿಗಳ ಬಂಧನಕ್ಕೆ ತೆರಳಿದ್ದರು. ಆಗ ಇಬ್ಬರು ದರೋಡೆಕೋರರು ಪಿಎಸ್ಐ ಮೇಲೆ ಬೈಕ್ ಹತ್ತಿಸಿದ್ದಾರೆ. ಈ ಸಂದರ್ಭದಲ್ಲಿ ಯಶವಂತ್ ಮೂಳೆ ಮುರಿದಿದ್ದು, ಬಾಣಸವಾಡಿಯ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ನೆಲಮಂಗಲ ಹಾಗೂ ಪೀಣ್ಯದಲ್ಲಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲು ತೆರಳಿದ್ದರು. ಈ ಹಿಂದೆ 2015ರ ಅಕ್ಟೋಬರ್ 16ರಂದು ಕಳ್ಳರನ್ನು ಹಿಡಿಯಲು ಹೋದ ಸಂದರ್ಭದಲ್ಲಿ ಬೈಕ್ ಕಳ್ಳರು ದೊಡ್ಡಬಳ್ಳಾಪುರ ಪಿಎಸ್ಐ ಜಗದೀಶ್ ಅವರನ್ನು ಕೊಲೆ ಮಾಡಿದ್ದರು.
