ವಾಸ್ತವವಾಗಿ ರಸ್ತೆ ಅಗಲೀಕರಣಕ್ಕೆ ದೀಪಾ ಕರ್ಮಾಕರ್ ಮೊದಲೇ ರಾಜ್ಯ ಸರ್ಕಾರವನ್ನು ಕೋರಿದ್ದರು. ಅವರ ಕೋರಿಕೆಗೆ ಸರ್ಕಾರ ಈಗ ಸ್ಪಂದಿಸಿದೆ. ರಾಜ್ಯ ಲೋಕೋಪಯೋಗಿ ಇಲಾಖೆಯು ಅಂದಾಜು 70ರಿಂದ 80 ಕೋಟಿ ಲಕ್ಷ ವೆಚ್ಚದಲ್ಲಿ ರಸ್ತೆ ಅಗಲೀಕರಣಕ್ಕೆ ರೂಪು-ರೇಷೆ ಸಿದ್ಧಪಡಿಸಿದೆ ಎಂದು ‘ಸ್ಪೋರ್ಟ್ಸ್ ಕೀಡಾ’ ವರದಿ ಮಾಡಿದೆ.

ಅಗರ್ತಲಾ(ಅ.19): ರಿಯೊ ಕೂಟದಲ್ಲಿನ ಐತಿಹಾಸಿಕ ಸಾಧನೆಗೆ ಮೆಚ್ಚಿ ಉಡುಗೊರೆಯಾಗಿ ಬಂದಿದ್ದ ಐಷಾರಾಮಿ ಬಿಡಬ್ಲ್ಯೂಎಂ ಕಾರಿನ ನಿರ್ವಹಣೆ ಅಸಾಧ್ಯ ಹಾಗೂ ತನ್ನ ಊರಿನ ರಸ್ತೆಗಳು ಕೂಡ ಕಿರಿದಾಗಿರುವುದರಿಂದ ಅದನ್ನು ಚಲಾಯಿಸುವುದೂ ಕಷ್ಟ ಎಂದು ಅದನ್ನು ಕೊಟ್ಟವರಿಗೇ ಹಿಂದಿರುಗಿಸುವುದಾಗಿ ಹೇಳಿದ್ದ ಜಿಮ್ನಾಸ್ಟ್ ದೀಪಾ ಕರ್ಮಾಕರ್ ನೆರವಿಗೆ ಧಾವಿಸಿರುವ ತ್ರಿಪುರಾ ಸರ್ಕಾರ, ಆಕೆಯ ಮನೆಯ ಆಸುಪಾಸಿನ ರಸ್ತೆಗಳ ಅಗಲೀಕರಣಕ್ಕೆ ಕ್ರಮ ಕೈಗೊಂಡಿದೆ.

ವಾಸ್ತವವಾಗಿ ರಸ್ತೆ ಅಗಲೀಕರಣಕ್ಕೆ ದೀಪಾ ಕರ್ಮಾಕರ್ ಮೊದಲೇ ರಾಜ್ಯ ಸರ್ಕಾರವನ್ನು ಕೋರಿದ್ದರು. ಅವರ ಕೋರಿಕೆಗೆ ಸರ್ಕಾರ ಈಗ ಸ್ಪಂದಿಸಿದೆ. ರಾಜ್ಯ ಲೋಕೋಪಯೋಗಿ ಇಲಾಖೆಯು ಅಂದಾಜು 70ರಿಂದ 80 ಕೋಟಿ ಲಕ್ಷ ವೆಚ್ಚದಲ್ಲಿ ರಸ್ತೆ ಅಗಲೀಕರಣಕ್ಕೆ ರೂಪು-ರೇಷೆ ಸಿದ್ಧಪಡಿಸಿದೆ ಎಂದು ‘ಸ್ಪೋರ್ಟ್ಸ್ ಕೀಡಾ’ ವರದಿ ಮಾಡಿದೆ.

ಅಂದಹಾಗೆ ಅಗರ್ತಲಾದಲ್ಲಿ ರಸ್ತೆಗಳು ಸರಿಯಿಲ್ಲದ ಹಿನ್ನೆಲೆಯಲ್ಲಿ ಹಾಗೂ ಬಿಎಂಡಬ್ಲ್ಯೂನಂಥಾ ಐಷಾರಾಮಿ ಕಾರನ್ನು ಸಂಭಾಳಿಸಲು ಕಷ್ಟವಾಗುತ್ತಿರುವುದರಿಂದ ಇದನ್ನು ಉಡುಗೊರೆಯಾಗಿ ನೀಡಿದ್ದ ಆಂಧ್ರಪ್ರದೇಶ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷ ವಿ. ಚಾಮುಂಡೇಶ್ವರನಾಥ್ ಅವರಿಗೇ ಹಿಂದಿರುಗಿಸುವುದಾಗಿ ಹೇಳಿದ್ದ ದೀಪಾ, ಈ ದುಬಾರಿ ಕಾರಿನ ಬದಲು ಹಣವನ್ನು ನೀಡಿದರೆ ಅದು ತನ್ನ ಕ್ರೀಡಾಬದುಕಿಗೆ ನೆರವಾಗುತ್ತದೆ ಎಂದು ಕೂಡ ಮನವಿ ಮಾಡಿದ್ದರು.