ನಾಮಕವಸ್ತೆಗೆ ಗೆಜೆಟ್ ನೋಟಿಫಿಕೇಷನ್ ಮಾತ್ರ ಕನ್ನಡದಲ್ಲಿ ಪ್ರಕಟಿಸಿದ್ದು, 800 ಪುಟಗಳ ಮಾಹಿತಿ ಇಂಗ್ಲಿಷ್'ನಲ್ಲಿ ಪ್ರಕಟಿಸಲಾಗಿದೆ.

ಬೆಂಗಳೂರು(ಡಿ.02): ನಮ್ಮ ಸರ್ಕಾರ ಸದಾ ಕನ್ನಡಕ್ಕೆ ಆದ್ಯತೆ ನೀಡುತ್ತದೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ದ್ವಿಮುಖ ನೀತಿ ವ್ಯಕ್ತವಾಗಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂದಿನ 15 ವರ್ಷಗಳ ಅಭಿವೃದ್ಧಿ ಯೋಜನೆಗಾಗಿ ಸಿದ್ದಪಡಿಸಿರುವ ಆರ್'ಎಂಪಿ 2031- ಪರಿಷ್ಕೃತ ಮಹಾ ಯೋಜನೆ ಪ್ರತಿ ಕನ್ನಡದಲ್ಲಿಲ್ಲ. ಬಿಡಿಎ ಸಿಬ್ಬಂದಿ ಇಂಗ್ಲಿಷ್'ನಲ್ಲಿ ಪ್ರಕಟಿಸಿ ಪ್ರಾಧಿಕಾರದ ವೆಬ್'ಸೈಟ್'ನಲ್ಲಿ ಕೂಡ ಇಂಗ್ಲಿಷ್'ನಲ್ಲಿ ಲಭ್ಯವಿದೆ.

ನಾಮಕವಸ್ತೆಗೆ ಗೆಜೆಟ್ ನೋಟಿಫಿಕೇಷನ್ ಮಾತ್ರ ಕನ್ನಡದಲ್ಲಿ ಪ್ರಕಟಿಸಿದ್ದು, 800 ಪುಟಗಳ ಮಾಹಿತಿ ಇಂಗ್ಲಿಷ್'ನಲ್ಲಿ ಪ್ರಕಟಿಸಲಾಗಿದೆ. ನಗರ ಯೋಜನಾ ತಜ್ಞರು,ಸಾಮಾನ್ಯರು ಭಾಷಾ ತಾರತಮ್ಯ ಮಾಡುತ್ತಿರುವ ಬಿಡಿಎಗೆ ಬೆಂಗಳೂರು ಅಭಿವೃದ್ಧಿಯ ಬಗ್ಗೆ ನಿಜವಾದ ಕಾಳಜಿ ಇದೆಯಾ ಎಂದು ಪ್ರಶ್ನಿಸಿದ್ದಾರೆ.