23 ಮಂದಿಗೆ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದು, ಅದರಲ್ಲಿ ಮಿತ್ರ ಪಕ್ಷಷದ ಓರ್ವಶಾಸಕನೂ ಕೂಡ ಸ್ಥಾನ ಪಡೆದುಕೊಂಡಿದ್ದಾರೆ. ರಾಜಸ್ಥಾನ ರಾಜ್ಯಪಾಲ ಕಲ್ಯಾಣ್ ಸಿಂಗ್ ಜೈಪುರದ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ.
ಜೈಪುರ : ಪಂಚರಾಜ್ಯ ಚುನಾವಣೆ ಮುಕ್ತಾಯವಾಗಿದ್ದು, ಈಗಾಗಲೇ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಏರಿದೆ.
ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನೇತೃತ್ವದಲ್ಲಿ ಸರ್ಕಾರ ರಚನೆಯಾಗಿದ್ದು, ಸೋಮವಾರ 23 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. 22 ಮಂದಿ ಕಾಂಗ್ರೆಸಿಗರಾಗಿದ್ದು, ಇನ್ನೋರ್ವ ಮೈತ್ರಿ ಪಕ್ಷದ ಶಾಸಕಗೂ ಕೂಡ ಸಚಿವ ಸ್ಥಾನ ದೊರಕಿದೆ. ಆರ್ ಎಲ್ ಡಿ ಶಾಸಕ ಸುಭಾಷ್ ಗರ್ಗ್ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಜೈಪುರ್ ರಾಜಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಕಲ್ಯಾಣ ಸಿಂಗ್ 23 ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ.
ಬಿ.ಡಿ ಕಲ್ಲಾ, ಶಾಂತಿ ಕುಮಾರ್ ದರಿವಾಲ, ಪರ್ಸಾದಿ ಲಾಲ್ ಮೀನ, ಬನ್ವರ್ ಲಾಲ್ ಮೇಘ್ವಾಲ್ , ಲಾಲ್ ಚಂದ್ ಕಟಾರಿಯಾ, ರಾಘು ಶರ್ಮ, ಪ್ರಮೋದ್ ಜೈನ್ ಭಯ್ಯಾ, ವಿಶ್ವೇಂದ್ರ ಸಿಂಗ್, ಹರೀಶ್ ಚೌಧರಿ ಸೇರಿದಂತೆ ಅನೇಕರು ಈ ವೇಳೆ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಮತ್ತು ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಡಿಸೆಂಬರ್ 17 ರಂದು ಪ್ರಮಾಣ ವಚನ ಸ್ವೀಕರಿಸಿದ್ದರು. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯೊಂದಿಗೆ ಮೂರು ದಿನಗಳ ಕಾಲ ಸಭೆ ನಡೆಸಿ ವಿವಿಧ ರೀತಿಯಲ್ಲಿ ಚರ್ಚೆ ನಡೆಸಿದ ಬಳಿಕ ಸದ್ಯ ಮಿತ್ರಪಕ್ಷದ ಓರ್ವರಿಗೆ ಸ್ಥಾನ ನೀಡುವ ಮೂಲಕ 23 ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ.
ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯನ್ನು ಸೇರಿ ರಾಜಸ್ಥಾನದಲ್ಲಿ ಒಟ್ಟು 30 ಸಚಿವ ಸ್ಥಾನಗಳಿದ್ದು, ಸದ್ಯ ಕೆಲ ಸ್ಥಾನಗಳನ್ನು ಬಾಕಿ ಉಳಿಸಿಕೊಳ್ಳಲಾಗಿದೆ.
