ಬೆಂಗಳೂರು: ಆರ್‌ಎಸ್‌ಎಸ್‌ನಿಂದ ಪ್ರಭಾವಿತನಾಗಿಯೇ ನಾಥೂರಾಮ್ ಗೋಡ್ಸೆ ಮಹಾತ್ಮ ಗಾಂಧೀಜಿ ಅವರನ್ನು ಕೊಂದಿರುವುದರಿಂದ ಆರ್‌ಎಸ್‌ಎಸ್‌ನವರೇ ಗಾಂಧೀಜಿ ಅವರನ್ನು ಕೊಂದಿರುವುದು. ಹೀಗಾಗಿ ಒಬ್ಬೊಬ್ಬ ಆರ್‌ಎಸ್‌ಎಸ್, ಬಿಜೆಪಿ ಕಾರ್ಯಕರ್ತರೂ ಗೋಡ್ಸೆಗಳೇ ಎಂದು ವಿಧಾನಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಇದೇ ಹೇಳಿಕೆ ನೀಡಿದ್ದಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯವರು ದೂರು ನೀಡಿದ್ದರು. ಬೇಕಿದ್ದರೆ ನನ್ನ ಮೇಲೂ ಕೇಸ್ ಹಾಕಿಸಲಿ ಎಂದೂ ಸವಾಲು ಹಾಕಿದ್ದಾರೆ. 

ನಾಥೂರಾಮ್ ಗೋಡ್ಸೆ ದೇಶಭಕ್ತ ಎಂದಿರುವ ಪ್ರಜ್ಞಾಸಿಂಗ್ ಠಾಕೂರ್ ಹಾಗೂ ಬೆಂಬಲಿಸಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಸಂಸದ ನಳಿನ್‌ಕುಮಾರ ಕಟೀಲ್ ವಿರುದ್ಧ ರಾಜ್ಯ ಕಾಂಗ್ರೆಸ್ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.