ಮುಕೇಶ್ ಅಂಬಾನಿಯವರು ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಪ್ರತಿಯೊಬ್ಬ ಷೇರುದಾರರಿಗೂ 1:1 ಬೋನಸ್ ನೀಡಿದ್ದಾರೆ. ಅಂದರೆ, ಒಂದು ಷೇರಿಗೆ ಮತ್ತೊಂದು ಹೊಸ ಷೇರು ಉಚಿತವಾಗಿ ಜೋಡಿತವಾಗುತ್ತದೆ. ಆರ್'ಐಎಲ್'ನ 100 ಷೇರು ಹೊಂದಿದವರು ಈಗ 200 ಷೇರುಗಳ ಒಡೆಯರಾಗಲಿದ್ದಾರೆ.

ನವದೆಹಲಿ(ಜುಲೈ 21): ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆ ಜಗತ್ತಿಗೆ ಪದಾರ್ಪಣೆ ಮಾಡಿ ಸರಿಯಾಗಿ 40 ವರ್ಷವಾಯಿತು. ಜಿಯೋ ಮೂಲಕ ಹೊಸ ಕಳೆಯೊಂದಿಗೆ ಲಕಲಕ ಹೊಳೆಯುತ್ತಿರುವ ರಿಲಾಯನ್ಸ್ ಸಂಸ್ಥೆ ತನ್ನ 40ನೆಯ ವಾರ್ಷಿಕೋತ್ಸವವನ್ನು ಹೆಮ್ಮೆಯಿಂದ ಆಚರಿಸಿಕೊಂಡಿದೆ. ಸಂಸ್ಥೆಯ ಮುಖ್ಯಸ್ಥ ಮುಕೇಶ್ ಅಂಬಾನಿ ಈ ಸಂದರ್ಭದಲ್ಲಿ ಹಲವು ಭರ್ಜರಿ ಗಿಫ್ಟ್'ಗಳನ್ನು ಹೊರಬಿಟ್ಟಿದ್ದಾರೆ. ಉಚಿತ ಮೊಬೈಲ್'ನಿಂದ ಹಿಡಿದು ಷೇರುದಾರರಿಗೆ ಬೋನಸ್ ಷೇರು ಸೇರಿದಂತೆ ಹಲವು ಕೊಡುಗೆಗಳನ್ನು ನೀಡಿದ್ದಾರೆ. ವಾರ್ಷಿಕೋತ್ಸವದ ಸಂದರ್ಭದಲ್ಲಿ ಆರ್'ಐಎಲ್'ನ ಷೇರುಗಳ ಮೌಲ್ಯ ಶೇ. 3.19ರಷ್ಟು ಹೆಚ್ಚಾಘಿ 1,578 ರೂ ತಲುಪಿದೆ. ಇದು ಕಳೆದ 9 ವರ್ಷಗಳಲ್ಲೇ ಆ ಸಂಸ್ಥೆಯ ಅತ್ಯಧಿಕ ಷೇರು ಮೌಲ್ಯವಾಗಿದೆ.

ಈ ಸಂತಸದ ಕ್ಷಣದಲ್ಲಿ ಮುಕೇಶ್ ಅಂಬಾನಿಯವರು ರಿಲಾಯನ್ಸ್ ಇಂಡಸ್ಟ್ರೀಸ್ ಸಂಸ್ಥೆಯ ಪ್ರತಿಯೊಬ್ಬ ಷೇರುದಾರರಿಗೂ 1:1 ಬೋನಸ್ ನೀಡಿದ್ದಾರೆ. ಅಂದರೆ, ಒಂದು ಷೇರಿಗೆ ಮತ್ತೊಂದು ಹೊಸ ಷೇರು ಉಚಿತವಾಗಿ ಜೋಡಿತವಾಗುತ್ತದೆ. ಆರ್'ಐಎಲ್'ನ 100 ಷೇರು ಹೊಂದಿದವರು ಈಗ 200 ಷೇರುಗಳ ಒಡೆಯರಾಗಲಿದ್ದಾರೆ.

ಅಂಬಾನಿ ತಮ್ಮ ಭಾಷಣದಲ್ಲಿ ಇನ್ನೊಂದು ಪ್ರಮುಖ ಮಾಹಿತಿಯೊಂದನ್ನು ತಿಳಿಸಿದರು. ಸಂಸ್ಥೆ ಆರಂಭಗೊಂಡಾಗ ಬಂಡವಾಳ ಹೂಡಿದವರಿಗೆ ಇವತ್ತು ಆ ಷೇರು ಮೌಲ್ಯ ಅತ್ಯಮೂಲ್ಯವಾಗಿದೆ. 1977ರಲ್ಲಿ ರಿಲಾಯನ್ಸ್ ಷೇರುಗಳ ಮೇಲೆ 1 ಸಾವಿರ ರೂ ಹೂಡಿಕೆ ಮಾಡಿದವರು ಇವತ್ತು 16 ಲಕ್ಷ ರೂಪಾಯಿಗೂ ಹೆಚ್ಚು ಹಣದ ಮಾಲೀಕರಾಗಿದ್ದಾರಂತೆ.