‘‘ಕೆಲವರನ್ನು ಗುಂಡಿಟ್ಟು ಕೊಲ್ಲುವುದಕ್ಕೆ ಖುಷಿಯಾಗುತ್ತದೆ,’’- ಜೇಮ್ಸ್ ಮ್ಯಾಟಿಸ್

ವಾಷಿಂಗ್ಟನ್(ಡಿ.07): ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಿವೃತ್ತ ಸೇನಾಧಿಕಾರಿ ಜೇಮ್ಸ್ ಮ್ಯಾಟಿಸ್ ಅವರನ್ನು ರಕ್ಷಣಾ ಸಚಿವರಾಗಿ ಆಯ್ಕೆ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕಟು ಮಾತುಗಳು ಹಾಗೂ ಆಫ್ಘನ್ ಹಾಗೂ ಇರಾಕ್ ಯುದ್ಧದ ಅನುಭವಗಳಿಂದಾಗಿ ಜೇಮ್ಸ್ ಅವರು ಸಾಕಷ್ಟು ಹೆಸರು ವಾಸಿಯಾಗಿದ್ದಾರೆ.

‘‘ದೇಶದ ಭದ್ರತಾ ನೀತಿ ಯಶಸ್ವಿಯಾಗಬೇಕೆಂದರೆ ಭ್ರದತಾ ಇಲಾಖೆಗೆ ಉತ್ತಮ ನಾಯಕತ್ವವಿರಬೇಕು. ಜೇಮ್ಸ್ ಅವರ ನೇಮಕವನ್ನು ನಾನು ಹೆಮ್ಮೆಯಿಂದ ಘೋಷಿಸುತ್ತಿದ್ದೇನೆ,’’ ಎಂದು ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘‘ಕೆಲವರನ್ನು ಗುಂಡಿಟ್ಟು ಕೊಲ್ಲುವುದಕ್ಕೆ ಖುಷಿಯಾಗುತ್ತದೆ,’’ ಎಂಬ ಜೇಮ್ಸ್ ಹೇಳಿಕೆ 2005ರಲ್ಲಿ ಭಾರೀ ವಿವಾದಕ್ಕೀಡಾಗಿತ್ತು.