ವಿವಾದ ಸೃಷ್ಟಿಸಿದ ಅಸ್ಸಾಂ NRC ಪ್ರಕ್ರಿಯೆ| ಕಾರ್ಗಿಲ್ ವೀರನನ್ನು ವಿದೇಶಿಗ ಎಂದ NRC|ಆಕ್ರೋಶಕ್ಕೆ ಕಾರಣವಾದ ಯೋಧ ಮೊಹ್ಮದ್ ಸನಾವುಲ್ಲಾ ಬಂಧನ| ಸಮಿವುಲ್ಲಾಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್| ಕೇಂದ್ರ, ಅಸ್ಸಾಂ ಸರ್ಕಾರ ಹಾಗೂ NRC ಅಧಿಕಾರಿಗಳಿಗೆ ನೋಟಿಸ್| ರಾಷ್ಟ್ರಪತಿ ಪದಕ ವಿಜೇತ ಯೋಧನಿಗೆ ಇದೆಂತಾ ಅವಮಾನ?|
ಗುವಾಹಟಿ(ಜೂ.09): ಅಸ್ಸಾಂನಲ್ಲಿ ಕೇಂದ್ರ ಸರ್ಕಾರದ NRC ಪ್ರಕ್ರಿಯೆ ಬಹುದೊಡ್ಡ ಅವಾಂತರ ಸೃಷ್ಟಿಸಿದ್ದು, ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದ ವೀರ ಯೋಧನೋರ್ವನನ್ನು ವಿದೇಶಿಗ ಎಂದು ಪರಿಗಣಿಸಿ ವಿವಾದ ಮೈಮೇಲೆ ಎಳೆದುಕೊಂಡಿದೆ.
NRC ಪ್ರಕ್ರಿಯೆ ಬಳಿಕ ಅಸ್ಸಾಂ ನ್ಯಾಯಾಧೀಕರಣ ಕಳೆದ ತಿಂಗಳು, ಭಾರತೀಯ ಸೇನೆಯ ನಿವೃತ್ತ ಯೋಧ ಮೊಹ್ಮದ್ ಸನಾವುಲ್ಲಾ ಅವರನ್ನು ವಿದೇಶಿಗ ಎಂದು ಪರಿಗಣಿಸಿದ ಪರಿಣಾಮ ಅವರನ್ನು ಬಂಧಿಸಲಾಗಿತ್ತು.
ಪ್ರಕರಣದ ವಿಚಾರಣೆ ನಡೆಸಿರುವ ಗುವಾಹಟಿ ಹೈಕೋರ್ಟ್, ಇದೀಗ ಸನಾವುಲ್ಲಾಗೆ ಜಾಮೀನು ನೀಡಿದ ಬಳಿಕ ಅವರನ್ನು ಬಂಧಮುಕ್ತಗೊಳಿಸಲಾಗಿದೆ.
ಆದರೆ ಸನಾವುಲ್ಲಾಗೆ ಕಾಮರೂಪ ಜಿಲ್ಲೆಯನ್ನು ತೊರೆಯದಂತೆ ಹೈಕೋರ್ಟ್ ಸೂಚನೆ ನೀಡಿದ್ದು, ಕೇಂದ್ರ ಸರ್ಕಾರ, ಅಸ್ಸಾಂ ಸರ್ಕಾರ, ಹಾಗೂ NRC ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
NRC ಪ್ರಕ್ರಿಯೆ ವೇಳೇ ನಿವೃತ್ತ ಯೋಧ ಸನಾವುಲ್ಲಾ ಅವರನ್ನು ವಿದೇಶಿಗ ಎಂದು ಘೋಷಿಸಿ ಗೋವಾಲ್ಪಾರದಲ್ಲಿನ ಡಿಟೆನ್ಷನ್ ಕೇಂದ್ರಕ್ಕೆ ಕಳಿಸಲಾಗಿತ್ತು. 2017 ರಲ್ಲಿ ನಿವೃತ್ತರಾಗಿದ್ದ ಯೋಧ ಸನಾವುಲ್ಲಾಗೆ 2014 ರಲ್ಲೇ ರಾಷ್ಟ್ರಪತಿ ಪದಕವೂ ದೊರೆತಿತ್ತು.
