ಬೆಂಗಳೂರು: ನಾನೊಬ್ಬನೇ ಅಲ್ಲ, ನಮ್ಮ ತಂಡದೊಂದಿಗೆ ರಾಜೀನಾಮೆ ನೀಡುತ್ತೇನೆ ಎಂದು ಕಾಂಗ್ರೆಸ್ಸಿನ ಬಂಡಾಯ ಶಾಸಕ ರಮೇಶ್ ಜಾರಕಿ ಹೊಳಿ ಪುನರುಚ್ಚರಿಸಿದ್ದಾರೆ. ಆದರೆ, ಎಷ್ಟು ಮಂದಿ ಎಂಬುದರ ಬಗ್ಗೆ ಈಗ ಮಾಹಿತಿ ನೀಡಲು ಆಗುವುದಿಲ್ಲ ಎಂದೂ ಹೇಳಿದ್ದಾರೆ. 5

ಭಾನುವಾರ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿಯ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ನೀಡುವುದಾದರೆ ನಾನೊಬ್ಬನೇ ನೀಡುವುದಿಲ್ಲ. ನಮ್ಮ ಟೀಂನೊಂದಿಗೆ ರಾಜೀನಾಮೆ ಕೊಡುತ್ತೇನೆ. ಎಷ್ಟು ಮಂದಿ ರಾಜೀನಾಮೆ ನೀಡುತ್ತೇವೆಂದು ಲೆಕ್ಕ ಹಾಕುವುದಕ್ಕೆ ಆಗಲ್ಲ. ಯಾವಾಗ ನೀಡುತ್ತೇನೆ ಎಂಬುದರ ಬಗ್ಗೆ ಈಗ ಮಾಹಿತಿ ನೀಡಲು ಸಾಧ್ಯವಿಲ್ಲ. ಮಾಧ್ಯಮಗಳಿಗೆ ಮಾಹಿತಿ ಕೊಟ್ಟೇ ರಾಜೀನಾಮೆ ನೀಡುತ್ತೇವೆ ಎಂದು ಹೇಳಿದರು. 

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಕೃಷ್ಣ ಅವರ ಭೇಟಿ ಬಗ್ಗೆ ಬೇರೆ ಅರ್ಥ ಕಲ್ಪಿಸುವುದು ಬೇಡ. 1999 ರಲ್ಲಿ ಮೊದಲ ಬಾರಿಗೆ ನನ್ನನ್ನು ಅವರು ಶಾಸಕರಾಗಿ ಮಾಡಿ ದ್ದರು. ಅವರು ನಮ್ಮ ನಾಯಕರು ಎಂಬ ಕಾರಣಕ್ಕೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದೇನೆ. ರಾಜಕೀಯ ವಿಚಾರದ ಬಗ್ಗೆ ಯಾವುದೇ ಚರ್ಚೆಡಿ ಮಾಡಿಲ್ಲ ಎಂದರು.