ಖಾಸಗಿ ವಲಯದ ಉದ್ಯೋಗದಲ್ಲಿ ಮೀಸಲಾತಿ ಜಾರಿಗೊಳಿಸಿದರೆ ಅದು ಭಾರತದ ಬಂಡವಾಳ ಹೂಡಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.ಹೂಡಿಕೆದಾರರಿಗೆ ರಾಜಕೀಯ ಪಕ್ಷಗಳು ತಪ್ಪು ಸಂದೇಶ ರವಾನಿಸಬಾರದು ಎಂದು ಕೈಗಾರಿಕಾ ಒಕ್ಕೂಟ ‘ಅಸೋಚಾಮ್’ ಹೇಳಿದೆ.

ನವದೆಹಲಿ: ಖಾಸಗಿ ವಲಯದ ಉದ್ಯೋಗದಲ್ಲಿ ಮೀಸಲಾತಿ ಜಾರಿಗೊಳಿಸಿದರೆ ಅದು ಭಾರತದ ಬಂಡವಾಳ ಹೂಡಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.ಹೂಡಿಕೆದಾರರಿಗೆ ರಾಜಕೀಯ ಪಕ್ಷಗಳು ತಪ್ಪು ಸಂದೇಶ ರವಾನಿಸಬಾರದು ಎಂದು ಕೈಗಾರಿಕಾ ಒಕ್ಕೂಟ ‘ಅಸೋಚಾಮ್’ ಹೇಳಿದೆ.

ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್, ಬಿಹಾರ ಸಿಎಂ ನಿತೀಶ್ ಕುಮಾರ್, ಕರ್ನಾಟಕ ಸಿಎಂ ಸಿದ್ದರಾಮಯ್ಯ ಖಾಸಗಿ ಮೀಸಲು ಪರ ಮಾತನಾಡಿದ್ದರು.

ಇದಕ್ಕೆ ಅಸೋಚಾಂ ಆಕ್ಷೇಪಿಸಿದ್ದು, ಭಾರತದ ಆರ್ಥಿಕತೆ ಉತ್ತೇಜನಕ್ಕೆ ಈಗ ಧನಾತ್ಮಕ ಅಂಶ ಬೇಕಾಗಿದ್ದು, ಖಾಸಗಿ ಮೀಸಲಿಂದ ಹೂಡಿಕೆಗೆ ಹಿನ್ನಡೆಯಾಗಲಿದೆ ಎಂದಿದೆ.