2016ರ ಲೋಕಸಭಾ ಚುನಾವಣೆಗೆ ಎರಡು ವರ್ಷಕ್ಕಿಂತ ಕಡಿಮೆ ಅವಧಿ ಇರುವ ಹಿನ್ನೆಲೆಯಲ್ಲಿ ‘ಒಳಮೀಸಲು’ ಅಸ್ತ್ರವೊಂದನ್ನು ತಯಾರಿಸುವ ಕೆಲಸಕ್ಕೆ ಕೇಂದ್ರ ಸರ್ಕಾರ ಕೈ ಹಾಕಿದೆ. ಅದರ ಒಂದು ಭಾಗವಾಗಿ, ಇತರೆ ಹಿಂದುಳಿದ ವರ್ಗ (ಒಬಿಸಿ) ಗಳ ಉಪವರ್ಗೀಕರಣ ಕುರಿತು ಪರಿಶೀಲನೆ ನಡೆಸಲು ಆಯೋಗವೊಂದನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ತೀರ್ಮಾನಿಸಿದೆ. ಹಲವು ದೂರಗಾಮಿ ಪರಿಣಾಮಗಳನ್ನು ಹೊಂದಿರುವ ಕೇಂದ್ರ ಸರ್ಕಾರದ ಈ ಕ್ರಮವನ್ನು ‘2019ರ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ತರಲಾಗುತ್ತಿರುವ ಮಂಡಲ್ 2.0’ ಎಂದು ವಿಶ್ಲೇಷಿಸಲಾಗುತ್ತಿದೆ
ನವದೆಹಲಿ(ಆ,24): 2016ರ ಲೋಕಸಭಾ ಚುನಾವಣೆಗೆ ಎರಡು ವರ್ಷಕ್ಕಿಂತ ಕಡಿಮೆ ಅವಧಿ ಇರುವ ಹಿನ್ನೆಲೆಯಲ್ಲಿ ‘ಒಳಮೀಸಲು’ ಅಸ್ತ್ರವೊಂದನ್ನು ತಯಾರಿಸುವ ಕೆಲಸಕ್ಕೆ ಕೇಂದ್ರ ಸರ್ಕಾರ ಕೈ ಹಾಕಿದೆ. ಅದರ ಒಂದು ಭಾಗವಾಗಿ, ಇತರೆ ಹಿಂದುಳಿದ ವರ್ಗ (ಒಬಿಸಿ) ಗಳ ಉಪವರ್ಗೀಕರಣ ಕುರಿತು ಪರಿಶೀಲನೆ ನಡೆಸಲು ಆಯೋಗವೊಂದನ್ನು ಸ್ಥಾಪಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ತೀರ್ಮಾನಿಸಿದೆ. ಹಲವು ದೂರಗಾಮಿ ಪರಿಣಾಮಗಳನ್ನು ಹೊಂದಿರುವ ಕೇಂದ್ರ ಸರ್ಕಾರದ ಈ ಕ್ರಮವನ್ನು ‘2019ರ ಲೋಕಸಭೆ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ತರಲಾಗುತ್ತಿರುವ ಮಂಡಲ್ 2.0’ ಎಂದು ವಿಶ್ಲೇಷಿಸಲಾಗುತ್ತಿದೆ.
ಕರ್ನಾಟಕ, ಆಂಧ್ರಪ್ರದೇಶ, ಬಿಹಾರ ಸೇರಿದಂತೆ 11 ರಾಜ್ಯಗಳಲ್ಲಿ ಒಬಿಸಿ ಉಪವರ್ಗೀಕರಣ ನಡೆದಿದೆ. ಆದರೆ ಕೇಂದ್ರ ಮಟ್ಟದಲ್ಲಿ ಇಂತಹ ಕೆಲಸ ಆಗಿಲ್ಲ. ಇದಕ್ಕಾಗಿ ಆಯೋಗವೊಂದನ್ನು ರಚಿಸಲಾಗುತ್ತದೆ. ಒಬಿಸಿ ವರ್ಗದ ವಿವಿ‘ ಜಾತಿ ಹಾಗೂ ಸಮುದಾಯಗಳ ನಡುವೆ ಮೀಸಲಾತಿಯ ಸವಲತ್ತಿನ ಅಸಮಾನ ಹಂಚಿಕೆ ಕುರಿತು ಉದ್ದೇಶಿತ ಆಯೋಗ ಪರಿಶೀಲಿಸಲಿದೆ ಎಂದು ಸಂಪುಟ ಸಭೆಯ ನಂತರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಸುದ್ದಿಗಾರರಿಗೆ ತಿಳಿಸಿದರು. ಆಯೋಗದ ಅಧ್ಯಕ್ಷರ ನೇಮಕವಾದ ದಿನದಿಂದ 12 ವಾರಗಳಲ್ಲಿ ಆಯೋಗ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.
ಒಬಿಸಿ ಮೀಸಲಿನ ಸೌಲಭ್ಯ ಎಲ್ಲ ಸಮುದಾಯಗಳಿಗೂ ತಲುಪಲಿ ಎಂಬ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು. ಒಬಿಸಿ ಉಪವರ್ಗೀಕರಣದ ಹಿಂದಿರುವ ಉದ್ದೇಶ ಒಬಿಸಿ ವರ್ಗಗಳಲ್ಲೇ ಒಳಮೀಸಲು ನೀಡುವ ತಂತ್ರಗಾರಿಕೆ ಎಂದು ಬಣ್ಣಿಸಲಾಗುತ್ತಿದೆ. ಮೂರು ದಶಕಗಳಿಂದ ಮೀಸಲಾತಿಯ ಸವಲತ್ತು ಪಡೆದು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಲವು ಸಮುದಾಯಗಳು ಮುಂದುವರಿದಿವೆ. ಆದರೆ ಇನ್ನೂ ಕೆಲವು ವರ್ಗಗಳಿಗೆ ಅದರ ಪ್ರಯೋಜನ ಪರಿಪೂರ್ಣವಾಗಿ ಸಿಕ್ಕಿಲ್ಲ. ಅಂತಹ ಸಮುದಾಯಗಳಿಗೆ ಒಳಮೀಸಲು ನೀಡಿ, ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಸರತ್ತು ಇದಾಗಿದೆ ಎಂದು ಹೇಳಲಾಗುತ್ತಿದೆ. 1990 ರಲ್ಲಿ ಮಂಡಲ ಆಯೋಗದ ವರದಿಯನ್ನು ವಿ.ಪಿ. ಸಿಂಗ್ ಸರ್ಕಾರ ಜಾರಿಗೆ ಮಾಡಿದ್ದರ ಲವಾಗಿ ದೇಶದಲ್ಲಿ ಒಬಿಸಿ ಸಮುದಾಯಗಳಿಗೆ ಶೇ.27 ಮೀಸಲಾತಿ ಲಭಿಸುತ್ತಿದೆ. ಇದನ್ನು ಇಂದ್ರಾ ಸ್ವಾನಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಕೂಡ ಎತ್ತಿಹಿಡಿದಿದೆ. ಉತ್ತರಪ್ರದೇಶ ವಿಧಾನಸಭೆ ಚುನಾವಣೆ ಸಂದ‘ರ್ದಲ್ಲಿ ಯಾದವೇತರ ಒಬಿಸಿ ಮತದಾರರ ಮೇಲೆ ಬಿಜೆಪಿ ಕಣ್ಣಿಟ್ಟಿತ್ತು. ಅದು ಲ ಕೊಟ್ಟಿತ್ತು. 2019ರ ಲೋಕಸಭೆ ಚುನಾವಣೆಯಲ್ಲಿ ಅತಿ ಹಿಂದುಳಿದ ವರ್ಗಗಳ ಬಗ್ಗೆ ಗಮನಹರಿಸಲು ಕೇಂದ್ರ ಹೊರಟಿದೆ ಎನ್ನಲಾಗುತ್ತಿದೆ.
ಮೀಸಲು ಲೆಕ್ಕ
-ಹಾಲಿ ಇತರೆ ಹಿಂದುಳಿದ ಸಮುದಾಯಕ್ಕೆ (ಒಬಿಸಿ) ಶೇ.27 ಮೀಸಲಾತಿ ಇದೆ
-ಆದರೆ, ಇದರ ಲಾ‘ ಒಬಿಸಿ ವರ್ಗದ ಕೆಲ ಜಾತಿ ಹಾಗೂ ಸಮುದಾಯಕ್ಕೆ ಸಿಗುತ್ತಿಲ್ಲ
-ಹೀಗಾಗಿ, ಒಬಿಸಿಯ ಉಪವರ್ಗೀಕರಣ ಮಾಡಲು ಕೇಂದ್ರ ಸರ್ಕಾರದ ಚಿಂತನೆ
-ಇದು ಒಳಮೀಸಲು ನೀಡಿ ಮೀಸಲಿಲ್ಲದ ಜನರ ಮತ ಸೆಳೆವ ತಂತ್ರವೆಂದು ವಿಶ್ಲೇಷಣೆ
-2019ರ ಲೋಕಸಭಾ ಚುನಾವಣೆಗಾಗಿ ‘ಮಂಡಲ್ 2.0’ ಜಾರಿಗೆ ಕೇಂದ್ರದ ಸಿದ್ಧತೆ
