ವಿಮಾನದಲ್ಲಿ ಪ್ರಯಾಣಿಸೋ ಆಸೆ ಇದ್ದರೆ, ಇದೆ ಸೂಪರ್ ಆಫರ್

First Published 24, Jan 2018, 5:35 PM IST
Republic day sale GoAir offers tickets at price of Rs 726
Highlights

ಗೋ ಏರ್ ವಿಮಾನವು ಗಣರಾಜ್ಯೋತ್ಸವಕ್ಕೆಂದು ವಿಶೇಷ ಆಫರ್ ನೀಡುತ್ತಿದ್ದು, ಕಡಿಮೆ ದರದಲ್ಲಿ ವಿಮಾನ ಪ್ರಯಾಣ ಮಾಡುವ ಅವಕಾಶ ನೀಡುತ್ತಿದೆ. ದೇಶೀಯ ಯಾನ ಮಾಡಲು ಈ ಸಂಸ್ಥೆ ಕೇವಲ 726 ರೂ.ಗೆ ಟಿಕೆಟ್ ನೀಡುತ್ತಿದೆ!

ಮುಂಬಯಿ: ಗೋ ಏರ್ ವಿಮಾನವು ಗಣರಾಜ್ಯೋತ್ಸವಕ್ಕೆಂದು ವಿಶೇಷ ಆಫರ್ ನೀಡುತ್ತಿದ್ದು, ಕಡಿಮೆ ದರದಲ್ಲಿ ವಿಮಾನ ಪ್ರಯಾಣ ಮಾಡುವ ಅವಕಾಶ ನೀಡುತ್ತಿದೆ. ದೇಶೀಯ ಯಾನ ಮಾಡಲು ಈ ಸಂಸ್ಥೆ ಕೇವಲ 726 ರೂ.ಗೆ ಟಿಕೆಟ್ ನೀಡುತ್ತಿದೆ!

ಕನಿಷ್ಠ 726 ರೂ.ಗೆ ಆರಂಭವಾಗುವ ಈ ಟಿಕೆಟ್ ದರ ಗರಿಷ್ಠ 3926 ರೂ.ವರೆಗೂ ಇರಲಿದೆ. ಗೋ ಏರ್ ಅಧಿಕೃತ ವೆಬ್‌ಸೈಟ್‌ನಿಂದಲೇ ಟಿಕೆಟ್ ಬುಕ್ ಮಾಡುವ ಗ್ರಾಹಕರಿಗೆ ಸಂಸ್ಥೆ 2500 ರೂ.ಗೆ ಟಿಕೆಟ್ ನೀಡುವ ವಿಶೇಷ ಆಫರ್ ನೀಡಿದೆ. ಈ ಆಫರ್ ಜನವರಿ 24ರಿಂದ 28ರವೆಗೆ ಲಭ್ಯವಿರಲಿದೆ. ಮಾರ್ಚ್ 1ರಿಂದ ಡಿಸೆಂಬರ್ 31ರವರೆಗೆ ಗ್ರಾಹಕರು ಈ ಆಫರ್ ಅಡಿಯಲ್ಲಿ ಟಿಕೆಟ್ ಬುಕ್ ಮಾಡಬಹುದು.

ಆದರೆ, ಈ ಆಫರ್‌ಗೆ ಕೆಲವು ಷರತ್ತುಗಳು ಅನ್ವಯಲಿಸಿದ್ದು, ಬುಕ್ ಮಾಡುವ ಸಮಯದಲ್ಲಿ ಅವುಗಳನ್ನು ಗಮನಿಸುವುದು ಒಳಿತು. ಇದೇ ಸಂದರ್ಭದಲ್ಲಿ ಪಯಣಿಸಲು ಈಗಾಗಲೇ ಟಿಕೆಟ್ ಬುಕ್ ಮಾಡಿದವರಿಗೆ ಈ ಆಫರ್ ಅನ್ವಯವಾಗುವುದಿಲ್ಲ. ಒಮ್ಮೆ ಟಿಕೆಟ್ ಬುಕ್ ಮಾಡಿದರೆ ಯಾವುದೇ ಕಾರಣಕ್ಕೆ ಹಣವನ್ನು ಮರು ಪಾವತಿಸುವುದಿಲ್ಲ. ಅಲ್ಲದೇ, ಲಗೇಜ್‌ಗೆ ಸಾಮಾನ್ಯ ವಿಮಾನದಲ್ಲಿ ಅನ್ವಯವಾಗೋ ನಿಯಮಗಳು, ಈ ಆಫರ್ ಅಡಿಯಲ್ಲಿ ಟಿಕೆಟ್ ಬುಕ್ ಮಾಡಿರುವ ಪ್ರಯಾಣಿಕರೂ ಅನ್ವಯವಾಗುತ್ತದೆ.

ಹೆಚ್ಚಿನ ಮಾಹಿತಿಗೆ www.GoAir.inAny ಇಲ್ಲಿಗೆ ಭೇಟಿ ನೀಡಬಹುದು.

ಸ್ಪೈಸ್‌ಜೆಟ್ ಸಹ ವಿಶೇಷ ಆಫರ್ ನೀಡುತ್ತಿದ್ದು, ಸೈಟ್‌ಗೆ ಭೇಟಿ ನೀಡಿದರೆ ಹೆಚ್ಚಿನ ವಿವರ ಪಡೆಯಬಹುದು.

loader