ಬಿಜೆಪಿ ಶಾಸಕ ಅಶೋಕ ಪ್ರಶ್ನೆಗೆ ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಉತ್ತ​ರ.

ಸುವರ್ಣಸೌಧ, ಬೆಳ​ಗಾ​ವಿ: ವಿಧಾ​ನ​ಸ​ಭೆ​ಯಲ್ಲಿ ಶುಕ್ರ​ವಾರ ನೈಸ್‌ ವರದಿ ಮಂಡ​ನೆ​ಯಾ​ಗ​ಲಿದೆ ಎಂದು ಮುಖ್ಯ​ಮಂತ್ರಿ ಸಿದ್ದ​ರಾ​ಮಯ್ಯ ಹೇಳಿ​ದ್ದಾರೆ. ಕಾನೂ​ನು ಸಚಿವ ಟಿ ಬಿ ಜಯ​ಚಂದ್ರ ಅವರು ಮಂಡಿಸ​ಲಿ​ದ್ದಾರೆ. ಆದರೆ ಅವರು ಬೆಂಗ​ಳೂ​ರಿಗೆ ಹೋಗಿದ್ದು, ಶುಕ್ರ​ವಾರ ವಾಪಸ್‌ ಆಗ​ಲಿ​ದ್ದಾರೆ. ಬಂದ ನಂತರ ವರದಿ ಮಂಡಿ​ಸ​ಲಿ​ದ್ದಾರೆ ಎಂದು ವಿಧಾ​ನ​ಸ​ಭೆ​ಯಲ್ಲೇ ಬಿಜೆಪಿ ಶಾಸ​ಕ ಆರ್‌ ಅಶೋಕ್‌ ಕೇಳಿದ ಪ್ರಶ್ನೆಗೆ ಉತ್ತ​ರಿ​ಸಿ​ದ್ದಾರೆ. 

ಗುರುವಾರ ಮಧ್ಯಾಹ್ನ ವಿಧಾನ​ಸಭೆ ಕಲಾಪ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸ​ಕ ಆರ್‌. ಅಶೋಕ, ನೈಸ್‌ ವರದಿ ಏನಾಯ್ತು, ಇಂದು (ಗುರು​ವಾ​ರ) ಮಂಡಿಸಬೇಕಿತ್ತು ಎಂದು ಸ್ಪೀಕರ್‌ ಅವ​ರನ್ನು ಉದ್ದೇಶಿಸಿ ಹೇಳಿದರು. ಇದಕ್ಕೆ ಉತ್ತ​ರಿ​ಸಿದ ಕೆ ಬಿ ಕೋಳಿವಾಡ ಅವ​ರು, ವರದಿಗೆ ಸಂಬಂಧಿಸಿದಂತೆ ತಮ್ಮ ಕೆಲಸ ಮುಗಿ​ದಿದೆ. ಈಗ ಮುದ್ರಣಕ್ಕೆ ಹೋಗಿದೆ. ಕಾನೂನು ಸಚಿವರು ಶುಕ್ರವಾರ ಮಂಡಿಸಬಹುದು ಎಂದರು. ಮತ್ತೆ ಆರ್‌.ಅಶೋಕ ಪ್ರಶ್ನಿಸಿದಾಗ, ಸಿಎಂ ಸಿದ್ದರಾಮಯ್ಯ ಎದ್ದುನಿಂತು ಕಾನೂನು ಸಚಿವರು ಶುಕ್ರವಾರ ಮಂಡಿಸಲಿದ್ದಾರೆ ಎಂದರು.