ನಗುವಿಗೆ ಜಿಎಸ್‌ಟಿ ಇಲ್ಲ, ಹೀಗಾಗಿ ನಗಲು ತಮಗೆ ಯಾರ ಅನುಮತಿಯೂ ಬೇಕಾಗಿಲ್ಲ ಎಂದು ಕಾಂಗ್ರೆಸ್‌ ಸಂಸದೆ ರೇಣುಕಾ ಚೌಧರಿ ಹೇಳಿದ್ದಾರೆ.

ಪಣಜಿ: ನಗುವಿಗೆ ಜಿಎಸ್‌ಟಿ ಇಲ್ಲ, ಹೀಗಾಗಿ ನಗಲು ತಮಗೆ ಯಾರ ಅನುಮತಿಯೂ ಬೇಕಾಗಿಲ್ಲ ಎಂದು ಕಾಂಗ್ರೆಸ್‌ ಸಂಸದೆ ರೇಣುಕಾ ಚೌಧರಿ ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಂಸತ್‌ ಭಾಷಣದ ವೇಳೆ ನಕ್ಕಿದ್ದ ಚೌಧರಿಯವರ ನಗುವಿಗೆ ಪ್ರಧಾನಿಯವರ ‘ರಾಮಾಯಣ’ದ ನಗುವಿನ ಹೋಲಿಕೆಗೆ, ಅವರು ತಿರುಗೇಟು ನೀಡಿದ್ದಾರೆ.

 ಮೋದಿಯವರ ಹೇಳಿಕೆ, ಮಹಿಳೆಯರ ಬಗ್ಗೆ ಅವರ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದೂ ಚೌಧರಿ ಹೇಳಿದ್ದಾರೆ.

‘ನಾನು ಐದು ಬಾರಿ ಸಂಸದೆಯಾಗಿದ್ದೇನೆ, ಪ್ರಧಾನಿಯವರು ನನ್ನನ್ನು ಋುಣಾತ್ಮಕ ಪಾತ್ರದೊಂದಿಗೆ ಹೋಲಿಸಿದ್ದಾರೆ. ಆದರೆ, ಈಗ ಮಹಿಳೆಯರು ಹೇಗೆ ಬದಲಾಗಿದ್ದಾರೆ, ತಮಗಾಗಿ ಅವರು ಹೇಗೆ ಮಾತನಾಡಬಲ್ಲರು ಎಂಬುದನ್ನು ಅವರು ಮರೆತಿದ್ದಾರೆ’ ಎಂದು ಚೌಧರಿ ತಿಳಿಸಿದ್ದಾರೆ.