ನವದೆಹಲಿ[ಆ. 19]  ರಾಷ್ಟ್ರೀಯ ಸ್ವಯಂ ಸೇವಕ ಸಂಘ [ಆರ್ ಎಸ್ ಎಸ್] ಮೀಸಲಾತಿ ವಿರೋಧಿ ನೀತಿಯಿಂದ ಮೊದಲು ಹೊರಬರಬೇಕು ಎಂದು ಬಹುಜನ ಸಮಾಜ ಪಾರ್ಟಿ ವರಿಷ್ಠೆ ಮಾಯಾವತಿ ಹೇಳಿದ್ದಾರೆ.

ಮೀಸಲಾತಿ ವ್ಯವಸ್ಥೆ ಬಗ್ಗೆ ಆರ್ ಎಸ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಾಡಿದ್ದ ಕಮೆಂಟ್ ನಂತರ ಮಾಯಾವತಿ ಮಾತನಾಡಿದ್ದಾರೆ.  ಎಸ್‌ ಸಿ ಮತ್ತು ಎಸ್ ಟಿ ಹಾಗೂ ಒಬಿಸಿಗೆ ನೀಡಿರುವ ಮೀಸಲಾತಿ ಬಗ್ಗೆ ಆರ್ ಎಸ್ ಎಸ್ ಮುಕ್ತ ಚರ್ಚೆಗೆ ಸಿದ್ಧವಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಅದರ ಅಗತ್ಯವೇ ಇಲ್ಲ ಎಂದು ಮಾಯಾವತಿ ಹೇಳಿದ್ದಾರೆ.

ಮೋದಿ ಸರ್ಕಾರ್ ದಿಟ್ಟ ಕ್ರಮವನ್ನು ಹಾಡಿ ಹೊಗಳಿದ ಆರ್ ಎಸ್ ಎಸ್

ಸಾಮಾಜಿಕವಾಗಿ ತುಳಿತಕ್ಕೆ ಒಳಗಾದವರಿಗೆ ಮಾನವೀಯತೆ ಆಧಾರದಲ್ಲಿ ನೀಡಿರುವ ಸವಲತ್ತು ಇದಾಗಿದೆ ಎಂದು ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿ ಅಭಿಪ್ರಾಯ ಪಟ್ಟಿದ್ದಾರೆ.

ಮೀಸಲಾತಿ ಪರ ಇರುವವರು ಮತ್ತು ವಿರೋಧಿಸುವವರ ನಡುವೆ ಸೌಹಾರ್ದಯುತ ವಾತಾವರಣದಲ್ಲಿ ಅರ್ಥಪೂರ್ಣ ಚರ್ಚೆ ನಡೆಯಬೇಕು ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌  ಹೇಳಿದ್ದರು.

ಈ ಹಿಂದೆ ನಾನು ಮೀಸಲಾತಿ ಬಗ್ಗೆ ಮಾತನಾಡಿದಾಗ , ಅನಗತ್ಯ ಪ್ರತಿಕ್ರಿಯೆಗಳ ಮೂಲಕ ಇಡೀ ಚರ್ಚೆಯ ದಿಕ್ಕನ್ನೇ ಬದಲಾಯಿಸಲಾಯಿತು. ಮೀಸಲಾತಿ ಬೇಡ ಎನ್ನುವವರು ಮೀಸಲಾತಿ ಪಡೆಯುತ್ತಿರುವವರು ಹಾಗೂ ಅದರ ಪರವಾಗಿರುವವರ ಇಂಗಿತವನ್ನು ಅರ್ಥೈಸಿಕೊಂಡು ನಂತರ ಮಾತನಾಡಬೇಕು. ಮೀಸಲಾತಿ ಬೇಕು ಎನ್ನುವವರು ಕೂಡ ವಿರೋಧಿಸುವವರ ಮನದ ಇಂಗಿತವನ್ನು ಮೊದಲು ತಿಳಿಯಬೇಕಿದೆ ಎಂದು ಭಾಗವತ್ ನೀಡಿದ್ದ ಹೇಳಿಕೆಯ ದಿನದ ನಂತರ ಮಾಯಾವತಿ ಮಾತನಾಡಿದ್ದಾರೆ.