ಇನ್ನು ಕೆಲವು ದಿನಗಳಲ್ಲಿ ಸಾವಿರ ರೂ.ಗೆ ಈ ರೀತಿಯ ಫೋನ್'ಗಳು ಸಾರ್ವಜನಿಕರಿಗೆ ಲಭ್ಯವಾಗಲಿದೆ

ಮುಂಬೈ(ಜ.12): ದೇಶದ ಇಂಟರ್'ನೆಟ್ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿಸಿ ಕೋಟ್ಯಂತರ ಮಂದಿಗೆ 6 ತಿಂಗಳು ಉಚಿತ ಅಂತರ್ಜಾಲ,ಕರೆ,ಎಸ್ಎಂಎಸ್ ಸೇರಿದಂತೆ ಹಲವು ಸೌಲಭ್ಯ ನೀಡಿರುವ ಜಿಯೋ ಸಂಸ್ಥೆ ಈಗ ಮತ್ತೊಂದು ಹೊಸ ಯೋಜನೆ ಕೈಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಜಿಯೋ ಕೈಗೊಂಡಿರುವ ಈ ಯೋಜನೆಯಲ್ಲಿ ಕೇವಲ ಒಂದು ಸಾವಿರ ರೂ'ಗೆ 4ಜಿ ವಾಯ್ಸ್ ಓವರ್' ಎಲ್'ಟಿಇ, ಜಿಯೋ ಚಾಟ್, ಲೈವ್ ಟಿವಿ, ವಿಡಿಯೋ ಸೇರಿದಂತೆ ಹಲವು ಫೀಚರ್'ಗಳ ಜೊತೆ ಉತ್ತಮ ಗುಣಮಟ್ಟದ ಫ್ರಂಟ್' ಹಾಗೂ ಬ್ಯಾಕ್ ಸೈಡ್ ಕ್ಯಾಮೆರಾ ಮುಂತಾದ ಸೌಲಭ್ಯಗಳಿವೆ. ಇವುಗಳ ಜೊತೆ ಉಚಿತ ಕರೆ, ಎಸ್'ಎಂಎಸ್ ಸೇವೆಯನ್ನು ಒದಗಿಸಲಾಗುತ್ತದೆ.

ಇನ್ನು ಕೆಲವು ದಿನಗಳಲ್ಲಿ ಸಾವಿರ ರೂ.ಗೆ ಈ ರೀತಿಯ ಫೋನ್'ಗಳು ಸಾರ್ವಜನಿಕರಿಗೆ ಲಭ್ಯವಾಗಲಿದ್ದು, ಇದಕ್ಕಾಗಿ ರಿಲಯನ್ಸ್ ಸಂಸ್ಥೆ ಚೀನಾದ ಅಗ್ಗದ ದರದಲ್ಲಿ ಫೋನ್'ಗಳನ್ನು ತಯಾರಿಸುವ ಚೀನಾದ ಸ್ಪ್ರೆಡ್ತ್ರುಮ್ ಕಂಪನಿಯ ಜೊತೆ ಮಾತುಕತೆ ನಡೆಸಲಿದೆ.