ರಿಲಾಯನ್ಸ್ ಜಿಯೋ ಹೊಸ ವರ್ಷಕ್ಕೆ ಹೊಸದಾದ 2 ಪ್ಲಾನ್'ಗಳನ್ನು ಘೊಷಿಸಿದೆ.

ನವದೆಹಲಿ (ಡಿ.23): ರಿಲಾಯನ್ಸ್ ಜಿಯೋ ಹೊಸ ವರ್ಷಕ್ಕೆ ಹೊಸದಾದ 2 ಪ್ಲಾನ್'ಗಳನ್ನು ಘೊಷಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪ್ರೀಪೇಯ್ಡ್ ಗ್ರಾಹಕರು ಒಂದು ಪ್ಲಾನ್ನಲ್ಲಿ 199 ರು. ರಿಚಾರ್ಜ್ ಮಾಡಬೇಕು. ಇದರಲ್ಲಿ ಉಚಿತ ವಾಯ್ಸ್ ಕಾಲ್ ಹಾಗೂ ಅನಿಯಮಿತ ಡೇಟಾ ಸೌಲಭ್ಯ ದೊರೆಯಲಿದೆ. (ಒಂದು ದಿನಕ್ಕೆ 1.2 ಜಿಬಿ 4ಜಿ ಡೇಟಾ ಸೌಲಭ್ಯ ಸಿಗಲಿದೆ). 28 ದಿನಗಳ ಕಾಲ ಸೌಲಭ್ಯದ ಪ್ರಯೋಜನ ಪಡೆಯಬಹುದಾಗಿದೆ.

ಇನ್ನೊಂದು ಪ್ಲಾನ್'ನಲ್ಲಿ 299 ರು. ರಿಚಾರ್ಜ್ ಮಾಡಬೇಕಾಗುತ್ತದೆ. ಇದರಲ್ಲಿಯೂ ಕೂಡ ಉಚಿತ ವಾಯ್ಸ್ ಕಾಲ್ ಹಾಗೂ ದಿನಕ್ಕೆ 2 ಜಿಬಿ 4ಜಿ ಡೇಟಾ ಸೌಲಭ್ಯ ಸಿಗಲಿದೆ. ಅನಿಯಮಿತ ಎಸ್'ಎಂಎಸ್ ಸೌಲಭ್ಯವೂ ದೊರೆಯುತ್ತದೆ. 28 ದಿನಗಳ ಕಾಲ ಇದರ ವಾಯಿದೆ ಇದೆ.