ದಿನಕ್ಕೆ 3 ತಾಸು ಎಸ್ಸೆಮ್ಮೆಸ್ ಮಾಡಿ, ತಿಂಗಳಿಗೆ 60 ಸಾವಿರ ಗಳಿಸಿ..!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 6, Sep 2018, 12:09 PM IST
Reliance Jio is not offering any SMS posting job for you
Highlights

ಈ ಸಂದೇಶವನ್ನು ನಂಬಿ ಲಿಂಕ್ ಕ್ಲಿಕ್ ಮಾಡಿದರೆ ಆಗುವ ಕತೆಯೇ ಬೇರೆ. ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಗೆ ಹೆಸರು, ವಿಳಾಸ, ವಿದ್ಯಾರ್ಹತೆ ಹೀಗೆ ವಿವಿಧ ವೈಯಕ್ತಿಕ ಮಾಹಿತಿಗಳನ್ನು ಭರ್ತಿ ಮಾಡಿ ನೋಂದಣಿ ಮಾಡುವಂತೆ ಸೂಚಿಸಲಾಗುತ್ತದೆ. ಈ ವೆಬ್ ಪೇಜ್‌ನ ವಿಶ್ವಾಸಾರ್ಹತೆ ತೋರಿಸಲು ಉದ್ಯೋಗ ಗಿಟ್ಟಿಸಿಕೊಂಡ ಹಲವು ಜನರ ಫೋಟೋಗಳನ್ನು ಹಾಕಲಾಗಿದೆ.

ನೀವು ಮನೆಯಲ್ಲೇ ಕುಳಿತು ತಿಂಗಳಿಗೆ 60 ಸಾವಿರ ರು. ಸಂಬಳ ಗಳಿಸುವ ಉದ್ಯೋಗವನ್ನು ರಿಲಯನ್ಸ್ ಜಿಯೋ ನೀಡುತ್ತಿದೆ. ದಿನದಲ್ಲಿ ಕೇವಲ 2ರಿಂದ 3 ಗಂಟೆ ಎಸ್‌ಎಂಎಸ್‌ಗಳನ್ನು ಪೋಸ್ಟ್ ಮಾಡಿದರೆ ಸಾಕು, ನೀವು ಮನೆಯಲ್ಲೇ ಕುಳಿತು ಕೈತುಂಬಾ ಸಂಬಳ ಪಡೆಯಬಹುದು. ಇದಕ್ಕೆ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಕೆಲಸಕ್ಕೆ ಅರ್ಜಿ ಹಾಕಿ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಆದರೆ, ಈ ಸಂದೇಶವನ್ನು ನಂಬಿ ಲಿಂಕ್ ಕ್ಲಿಕ್ ಮಾಡಿದರೆ ಆಗುವ ಕತೆಯೇ ಬೇರೆ. ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿಗೆ ಹೆಸರು, ವಿಳಾಸ, ವಿದ್ಯಾರ್ಹತೆ ಹೀಗೆ ವಿವಿಧ ವೈಯಕ್ತಿಕ ಮಾಹಿತಿಗಳನ್ನು ಭರ್ತಿ ಮಾಡಿ ನೋಂದಣಿ ಮಾಡುವಂತೆ ಸೂಚಿಸಲಾಗುತ್ತದೆ. ಈ ವೆಬ್ ಪೇಜ್‌ನ ವಿಶ್ವಾಸಾರ್ಹತೆ ತೋರಿಸಲು ಉದ್ಯೋಗ ಗಿಟ್ಟಿಸಿಕೊಂಡ ಹಲವು ಜನರ ಫೋಟೋಗಳನ್ನು ಹಾಕಲಾಗಿದೆ.

ಅಲ್ಲಿ ಕೇಳಿದ ಎಲ್ಲಾ ಮಾಹಿತಿಯನ್ನೂ ಭರ್ತಿ ಮಾಡಿದ ಬಳಿಕ ಅಪ್ಲೈ ಬಟನ್ ಕ್ಲಿಕ್ ಮಾಡಬೇಕು. ಆದರೆ, ನೀವು ಅರ್ಜಿ ಭರ್ತಿ ಮಾಡಿದ್ದಕ್ಕೆ ಸ್ವೀಕೃತಿ ಸಿಗುವ ಬದಲು ಬ್ಲಾಗ್ ಪೇಜ್'ವೊಂದು ತೆರೆದುಕೊಳ್ಳುತ್ತದೆ. ಬಳಿಕ ನೀವು ಉದ್ಯೋಗಕ್ಕೆ ಅರ್ಹತೆ ಗಿಟ್ಟಿಸಲು ಸಂದೇಶವನ್ನು ವಾಟ್ಸಾಪ್‌ನಲ್ಲಿ ಹಲವು ಬಾರಿ ಶೇರ್ ಮಾಡುವಂತೆ ಕೇಳಲಾಗುತ್ತದೆ. ಕೊನೆಯಲ್ಲಿ ಕೆಲವೊಂದು ಷರತ್ತುಗಳನ್ನು ನಮೂದಿಸಲಾಗಿದೆ. ಆದರೆ, ಈ ಷರತ್ತುಗಳಲ್ಲಿ ಯಾವುದೋ ಸಂಬಂಧವಿಲ್ಲದ ವಿಷಯಗಳನ್ನು ಬರೆಯಲಾಗಿರುತ್ತದೆ. ಹೀಗಾಗಿ ಜಿಯೋ ಕಂಪನಿ ಎಸ್ಎಂಎಸ್ ಪೋಸ್ಟಿಂಗ್ ಕೆಲಸಕ್ಕೆ ಅರ್ಜಿ ಆಹ್ವಾನಿಸಿದೆ ಹಾಗೂ ತಿಂಗಳಿಗೆ 60 ಸಾವಿರ ರು. ವೇತನ ನೀಡುತ್ತಿದೆ ಎಂಬ ಸುದ್ದಿ ಸಂಪೂರ್ಣ ಸುಳ್ಳು. ನಕಲಿ ವೆಬ್‌ಸೈಟ್ ಲಿಂಕ್ ನೀಡಿ ಜನರನ್ನು ಯಾಮಾರಿಸಲಾಗುತ್ತಿದೆ.

loader