ಇವತ್ತೂ ಶ್ರೀದೇವಿ ಮೃತದೇಹ ಹಸ್ತಾಂತರಿಸೋದು ಕಷ್ಟ

First Published 26, Feb 2018, 6:35 PM IST
Releasing the body of Sridevi is doubt today
Highlights

ಫೋರೆನ್ಸಿಕ್ ವರದಿಯನ್ನು ಪೊಲೀಸರು ಬಹಿರಂಗಪಡಿಸಿದ್ದು, ಪ್ರಜ್ಞೆ ತಪ್ಪಿ, ಬಾತ್‌ಟಬ್‌ಗೆ ಬಿದ್ದಿದ್ದರಿಂದ ನಟಿ ಶ್ರೀದೇವಿ ಮೃತಪಟ್ಟಿರುವುದನ್ನು ಪೊಲೀಸರು ದೃಢಪಡಿಸಿದ್ದಾರೆ. 

ದುಬೈ: ಫೋರೆನ್ಸಿಕ್ ವರದಿಯನ್ನು ಪೊಲೀಸರು ಬಹಿರಂಗಪಡಿಸಿದ್ದು, ಪ್ರಜ್ಞೆ ತಪ್ಪಿ, ಬಾತ್‌ಟಬ್‌ಗೆ ಬಿದ್ದಿದ್ದರಿಂದ ನಟಿ ಶ್ರೀದೇವಿ ಮೃತಪಟ್ಟಿರುವುದನ್ನು ಪೊಲೀಸರು ದೃಢಪಡಿಸಿದ್ದಾರೆ. 

ಈ ಹಿನ್ನೆಲೆಯಲ್ಲಿ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಸಂಬಂಧ ತೆಗೆದುಕೊಳ್ಳಬೇಕಾದ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸರಕಾರಿ ಅಭಿಯೋಜಕರಿಗೆ ದುಬೈ ಪೊಲೀಸರು ವಹಿಸಿದ್ದಾರೆ. ಮೃತದೇಹವನ್ನು ಇಂದು ಹಸ್ತಾಂತರಿಸುವುದು ಕಷ್ಟಸಾಧ್ಯವಿದ್ದು, ಸ್ವದೇಶಕ್ಕೆ ಬರುವುದು ಮತ್ತಷ್ಟು ತಡವಾಗಲಿದೆ. ಈ ಬಗ್ಗೆ ಇನ್ನು ಸ್ಪಷ್ಟ ಚಿತ್ರಣ ಸಿಕ್ಕಿಲ್ಲ.

ಈ ಸಾವಿನ ಪ್ರಕರಣವನ್ನು ಪೊಲೀಸರು ತನಿಖೆ ನಡೆಸುತ್ತಿರುವುದರಿಂದ ಹೊಟೇಲ್‌ನಲ್ಲಿ ನಡೆದ ಘಟನೆ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಬಹಿರಂಗ ಪಡಿಸಲು ಸಿಬ್ಬಂದಿ ನಿರಾಕರಿಸುತ್ತಿದ್ದಾರೆ, ಎನ್ನಲಾಗಿದೆ.
 

loader