ಅಧಿಕೃತ ಸಂವಹನದಲ್ಲಿ ದಲಿತ ಪದ ಬಳಸುವಂತಿಲ್ಲ

First Published 24, Jan 2018, 8:34 AM IST
Refrain From Using Word Dalit Madhya Pradesh High Court Tells State Governments
Highlights

ಯಾವುದೇ ಅಧಿಕೃತ ಸಂವಹನದಲ್ಲಿ ದಲಿತ ಪದ ಬಳಸದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶಿಸಿದೆ.

ಭೋಪಾಲ್: ಯಾವುದೇ ಅಧಿಕೃತ ಸಂವಹನದಲ್ಲಿ ದಲಿತ ಪದ ಬಳಸದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮಧ್ಯಪ್ರದೇಶ ಹೈಕೋರ್ಟ್ ನಿರ್ದೇಶಿಸಿದೆ.

ಸಂವಿಧಾನದಲ್ಲಿ ದಲಿತ ಎಂಬ ಪದದ ಉಲ್ಲೇಖ ಇಲ್ಲದಿರುವುದೇ ಈ ನಿರ್ದೇಶನಕ್ಕೆ ಕಾರಣ. ದಲಿತ ಪದದ ಬದಲಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಎಂಬ ಪದ ಬಳಸುವಂತೆ ಹೈಕೋರ್ಟ್ ಸೂಚಿಸಿದೆ.

ಪರಿಶಿಷ್ಟರ ಅಪಮಾನಕ್ಕಾಗಿ ಮೇಲ್ಜಾತಿಯವರು ಅವಹೇಳನಕಾರಿಯಾದ ದಲಿತ ಎಂಬ ಪದ ಬಳಸುತ್ತಾರೆ ಎಂದು ಸಾಮಾಜಿಕ ಕಾರ್ಯಕರ್ತ ಮೋಹನ್ ಲಾಲ್ ಎಂಬುವರು ಪಿಐಎಲ್ ಸಲ್ಲಿಸಿದ್ದರು. ಈ ವೇಳೆ ಕೋರ್ಟ್ ಈ ಆದೇಶ ಹೊರಡಿಸಿದೆ.

loader