ವಿಧಾನಸೌಧದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿಗೂ ಮಳೆ ತಟ್ಟಿದೆ. ದೂರದೂರುಗಳಿಂದ ಕಾರ್ಯಕ್ರಮಕ್ಕೆ ಆಗಮಿಸಿದವರು ಮಳೆಯಿಂದ ನಲುಗಿ ಹೋಗಿ ಸಿಕ್ಕ ಸಿಕ್ಕಲ್ಲಿ ಬಚ್ಚಿಟ್ಟುಕೊಂಡರು. ಕೆಲವರು ಬಸ್ ಕೆಳಗೆ ಅವಿತುಕೊಂಡರೆ, ಮತ್ತೆ ಕೆಲವರು ಚೇರ್ಗಳನ್ನೇ ಕೊಡೆಯಾಗಿ ಬಳಸಿಕೊಂಡರು.
ಬೆಂಗಳೂರು ಮತ್ತೊಮ್ಮೆ ನಡುಗಿ ಹೋಗಿದೆ. ಮಧ್ಯಾಹ್ನದ ಹೊತ್ತಿಗೆ ಎಂಟ್ರಿಕೊಟ್ಟ ವರುಣ ಇಡೀ ಸಿಟಿಯನ್ನು ಮಳೆಯಲ್ಲಿ ಮುಳುಗಿಸಿದ್ದು, ವಾಹನ ಸವಾರರು ಪರದಾಡಿದರು.
ಶಿವನಹಳ್ಳಿಯಲ್ಲಿ ಮರ ಧರೆಗುರುಳಿ ಒಂದು ಆಟೋ,ಒಂದು ಬೈಕ್ ಜಖಂ ಗೊಂಡಿವೆ. ಶಾಂತಿಗರದ ಬಿಎಂಟಿಸಿ ಡಿಪೋವಂತೂ ಸಂಪೂರ್ಣ ಜಲಾವೃತವಾಗಿತ್ತು. ವಿಲ್ಸನ್ ಗಾರ್ಡನ್ನ ಬಹುತೇಕ ರಸ್ತೆಗಳು ಕೆರೆಯಂತಾಗಿದ್ವು. ಇತ್ತ ಮೆಜೆಸ್ಟಿಕ್ ಸುತ್ತಾ ಮುತ್ತ ಜನ ತೊಂದರೆ ಅನುಭವಿಸಿದರು. ತ್ರಿವೇಣಿ ಥಿಯೇಟರ್ ಎದುರಿನ ರಸ್ತೆಯಲ್ಲಿ ನೀರು ರಭಸದಿಂದ ಹರಿಯುತ್ತಿತ್ತು. ಬಿನ್ನಿ ಮಿಲ್ ರಸ್ತೆಯಲ್ಲಿರುವ ಆರೋಗ್ಯಭವನಕ್ಕೆ ನೀರು ನುಗ್ಗಿ ಅವಾಂತರವಾಗಿದೆ.
ಎಲೆಕ್ಟ್ರಾನಿಕ್ ಸಿಟಿಯಲ್ಲಂತೂ ಕಾರುಗಳು ಬಹುತೇಕ ಮುಳುಗಿ ಹೋಗಿವೆ.ವಾಹನಗಳು ನೀರಿನಲ್ಲಿ ತೇಲಾಡುತ್ತಿರುವಂತೆ ಭಾಸವಾಗುತ್ತಿತ್ತು. ಇನ್ಫೋಸಿಸ್ ಕ್ಯಾಂಪಸ್ ಕೂಡ ಮಳೆ ನೀರಿನಿಂದ ಕೆರೆಯಂತಾಗಿತ್ತು. ವಿಧಾನಸೌಧದಲ್ಲಿ ಆಯೋಜಿಸಿದ್ದ ವಾಲ್ಮೀಕಿ ಜಯಂತಿಗೂ ಮಳೆ ತಟ್ಟಿದೆ. ದೂರದೂರುಗಳಿಂದ ಕಾರ್ಯಕ್ರಮಕ್ಕೆ ಆಗಮಿಸಿದವರು ಮಳೆಯಿಂದ ನಲುಗಿ ಹೋಗಿ ಸಿಕ್ಕ ಸಿಕ್ಕಲ್ಲಿ ಬಚ್ಚಿಟ್ಟುಕೊಂಡರು. ಕೆಲವರು ಬಸ್ ಕೆಳಗೆ ಅವಿತುಕೊಂಡರೆ, ಮತ್ತೆ ಕೆಲವರು ಚೇರ್ಗಳನ್ನೇ ಕೊಡೆಯಾಗಿ ಬಳಸಿಕೊಂಡರು.
ಇನ್ನು ಒಂದು ವಾರ ಮಳೆ :ಹವಾಮಾನ ಇಲಾಖೆ ಎಚ್ಚರಿಕೆ
ನಗರದ ಶಾಂತಿನಗರ, ಮಲ್ಲೇಶ್ವರಂ, ಶಿವಾಜಿನಗರ, ನಾಯಂಡಹಳ್ಳಿ, ಕೋರಮಂಗಲ, ಮಾಗಡಿ ರಸ್ತೆ, ವಿಜಯ ನಗರ, ಆನೇಕಲ್ ಸೇರಿದಂತೆ ಬಹುತೇಕ ಪ್ರದೇಶಗಳು ಮಳೆಯಿಂದ ಜಲಾವೃತವಾಗಿವೆ. ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನು ಐದು ದಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
