ಉತ್ತರ ಪ್ರದೇಶದಲ್ಲಿ ಇಂದು ನಡೆದ 5 ನೇ ವಿಧಾನಸಭಾ ಚುನಾವಣೆಯಲ್ಲಿ ದಾಖಲೆ ಮಟ್ಟದ ನಗದು, ಭಾರೀ ಪ್ರಮಾಣದ ಮದ್ಯ, ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ನವದೆಹಲಿ (ಫೆ.27): ಉತ್ತರ ಪ್ರದೇಶದಲ್ಲಿ ಇಂದು ನಡೆದ 5 ನೇ ವಿಧಾನಸಭಾ ಚುನಾವಣೆಯಲ್ಲಿ ದಾಖಲೆ ಮಟ್ಟದ ನಗದು, ಭಾರೀ ಪ್ರಮಾಣದ ಮದ್ಯ, ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

4.21 ಕೋಟಿ ನಗದು, 6.43 ಕೋಟಿ ಮೌಲ್ಯದ 2.20 ಲಕ್ಷ ಮದ್ಯ, 47.7 ಲಕ್ಷ ಮೌಲ್ಯದ ಡ್ರಗ್ಸ್, 53.36 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಉಪ ಚುನಾವಣಾಧಿಕಾರಿ ವಿಜಯ್ ಕುಮಾರ್ ಹೇಳಿದ್ದಾರೆ.

ಚುನಾವಣಾ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿತ್ತು. ಆದರೂ ಅಕ್ರಮ ಹಣ ಸಿಕ್ಕಿದೆ ಎಂದಿದ್ದಾರೆ.