ಪೊಲೀಸ್ ವೇತನ ಹೆಚ್ಚಳಕ್ಕೆ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರ ಸಮಿತಿಯ ಶಿಫಾರಸುಗಳತ್ತ ಕಣ್ಣೆತ್ತಿಯೂ ನೋಡಿಲ್ಲ. ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಪೊಲೀಸರಿಗೆ ಸಂಪೂರ್ಣ ನಿರಾಸೆಯಾಗಿದೆ..
ಬೆಂಗಳೂರು(ನ.18): ತೀವ್ರ ನಿರೀಕ್ಷೆ ಹುಟ್ಟಿಸಿದ್ದ ಪೊಲೀಸರ ವೇತನ ಮತ್ತೊಮ್ಮೆ ಹುಸಿಯಾಗಿದೆ. ಯಾಕಂದರೆ ರಾಜ್ಯ ಸರ್ಕಾರ ಪೊಲೀಸರ ಮೂಗಿಗೆ ತುಪ್ಪು ಸವರಿದೆ. ಪೊಲೀಸರ ವೇತನ ಹೆಚ್ಚಳ ಮಾಡದೇ, ಕೇವಲ ಭತ್ಯೆ ಹೆಚ್ಚಳ ಮಾಡಿದೆ. ನಿರ್ವಹಣಾ ಭತ್ಯೆ 600 ರೂ.ಗೆ ಹೆಚ್ಚಳ ಮಾಡಿದೆ. ಇದು ಕಾನ್ಸ್ಟೇಬಲ್ನಿಂದ ಸಬ್ಇನ್ಸ್ಪೆಕ್ಟರ್ವರೆಗೂ ಭತ್ಯೆ ಅನ್ವಯವಾಗಲಿದೆ. ಅಚ್ಚರಿ ಅಂದ್ರೆ ವೇತನ ಹೆಚ್ಚಳಕ್ಕೆ ರಾಘವೇಂದ್ರ ಔರಾದ್ಕರ್ ಸಮಿತಿ ನೇಮಕ ಮಾಡಿತ್ತು. ಆದ್ರೆ, ಆ ಸಮಿತಿಯ ಎಲ್ಲ ಶಿಫಾರಸುಗಳನ್ನು ಸರ್ಕಾರ ತಳ್ಳಿಹಾಕಿದೆ. ಪೊಲೀಸ್ ವೇತನ ಹೆಚ್ಚಳಕ್ಕೆ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರ ಸಮಿತಿಯ ಶಿಫಾರಸುಗಳತ್ತ ಕಣ್ಣೆತ್ತಿಯೂ ನೋಡಿಲ್ಲ. ವೇತನ ಹೆಚ್ಚಳದ ನಿರೀಕ್ಷೆಯಲ್ಲಿದ್ದ ಪೊಲೀಸರಿಗೆ ಸಂಪೂರ್ಣ ನಿರಾಸೆಯಾಗಿದೆ..
ಪೊಲೀಸರ ವೇತನದಲ್ಲಿ ಕರ್ನಾಟಕಕ್ಕೆ 9ನೇ ಸ್ಥಾನ
ಬೇರೆ ರಾಜ್ಯದ ಪೊಲೀಸರಿಗೂ, ನಮ್ಮ ರಾಜ್ಯದ ಪೊಲೀಸರಿಗೂ ಸಂಬಳದಳದಲ್ಲಿ ವ್ಯತ್ಯಾಸ ಎಷ್ಟಿದೆ ಅಂತಾ ನೋಡಿದ್ರೆ, ನಮ್ ಪೊಲೀಸರು ಇಷ್ಟು ಕಡಿಮೆ ಸಂಬಳಕ್ಕೆ ಕೆಲಸ ಮಾಡ್ತಿದ್ದಾರೆ ಅಂಥಾ ಅನ್ನಿಸದೇ ಇರೋದಿಲ್ಲ. ಏಕಂದ್ರೆ, ಇಡೀ ದೇಶದಲ್ಲಿ ಕಡಿಮೆ ಸಂಬಳ ಪಡೆಯುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ಪೊಲೀಸ್ಗೆ ಇರೋದು 9ನೇ ಸ್ಥಾನ. ನಮ್ಮ ರಾಜ್ಯಕ್ಕಿಂತ ಚಿಕ್ಕ ರಾಜ್ಯಗಳಲ್ಲೂ ಪೊಲೀಸರು ಒಳ್ಳೆಯ ಸೌಲಭ್ಯ, ಸವಲತ್ತು ಪಡೀತಾ ಇದಾರೆ. ನಮ್ಮ ಪೊಲೀಸ್ ಕಾನ್ಸ್ಟೇಬಲ್ಗಳು 11 ಸಾವಿರದ ಆರುನೂರು ರೂಪಾಯಿ ಬೇಸಿಕ್ನಿಂದ 21 ಸಾವಿರ ರೂಪಾಯಿವರೆಗೂ ಸಂಬಳ ತಗೋತಾರೆ. ಅದೇ ತೆಲಂಗಾಣ ಕಾನ್ಸ್ಟೇಬಲ್ಗಳ ಸಂಬಳ ಬೇಸಿಕ್ ಶುರುವಾಗೋದೇ 16 ಸಾವಿರದ ನಾಲ್ಕುನೂರು ರೂಪಾಯಿಯಿಂದ. ಗರಿಷ್ಠ 49 ಸಾವಿರದ 870 ಅಂದ್ರೆ ಹತ್ತಿರ ಹತ್ತಿರ ಐವತ್ ಸಾವ್ರ ತಗೊಳ್ತಾರೆ. ನಮ್ಮ ಹೆಡ್ಕಾನ್ ಸ್ಟೇಬಲ್ಗಳ ಸಂಬಳ 12 ಸಾವಿರದ ಐನೂರರಿಂದ, 24 ಸಾವಿರದವರೆಗೆ ಇದ್ರೆ, ತೆಲಂಗಾಣದಲ್ಲಿ 21 ಸಾವಿರದ 230 ರೂ.ನಿಂದ 63 ಸಾವಿರದವರೆಗೆ ಇದೆ. ಪಂಜಾಬ್ ಕಾನ್ಸ್ಟೇಬಲ್ಗಳೂ ಕರ್ನಾಟಕದವರಿಗಿಂತ ಜಾಸ್ತಿ ಸಂಬಳ ತಗೊಳ್ತಾರೆ. ಅವರ ಬೇಸಿಕ್ ಶುರುವಾಗೋದು ಕರ್ನಾಟಕದವರಿಗಿಂತ ಕಡಿಮೆ ಅಂದ್ರೆ, 10 ಸಾವಿರದ 300 ರೂ.ನಿಂದ ಶುರುವಾದ್ರೂ, ಗರಿಷ್ಠ 38 ಸಾವಿರದ ವರೆಗೆ ಪಡೆಯಬಹುದು. ಹೆಡ್ಕಾನ್ಸ್ಟೇಬಲ್ಗಳ ಸಂಬಳದಲ್ಲೂ ವ್ಯತ್ಯಾಸ ಇಲ್ಲ. ಅಲ್ಲದೆ, ಪಂಜಾಬ್ನಲ್ಲಿ ಪೊಲೀಸರಿಗೆ ಸಂಬಳ ಹೊರತಾದ ಇತರೆ ವಿಶೇಷ ಸೌಲಭ್ಯ, ಸವಲತ್ತುಗಳು ಹೆಚ್ಚಾಗಿವೆ.
