ಅಂಬಿ ಮನೇಲಿ ಅಯೋಗ್ಯನ ಅಬ್ಬರ !

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 19, Jul 2018, 8:19 PM IST
Rebel star Ambareesh RELEASES Ayogya Kannada Movie SONG
Highlights

  • ನಟ ಅಂಬಿ ಮನೆಯಲ್ಲಿ ನೀನಾಸಂ ಸತೀಶ್ ನಟನೆಯ ಅಯೋಗ್ಯ ಹಾಡಿನ ಧ್ವನಿಸುರಳಿ ಬಿಡುಗಡೆ
  • ಅಯೋಗ್ಯ ಚಿತ್ರದಲ್ಲೂ ಒಂದು ಹಾಡು ಹಾಡಿರುವ ಟಗರು ಖ್ಯಾತಿಯ ಆಂಟೋನಿ ದಾಸನ್  

ಬೆಂಗಳೂರು[ಜು.19]: ರೆಬಲ್ ಸ್ಟಾರ್ ಅಂಬರೀಶ್ ಮನೆಯಲ್ಲಿ ಅಯೋಗ್ಯನ ಅಬ್ಬರ. ಅಂಬಿ ಮನೆಯಲ್ಲಿಯೇ ಅಂಬಿಗೆ ಸ್ವಾಗತ. ಹೌದು..! ಜೆ.ಪಿ.ನಗರದ ಅಂಬರೀಶ್ ಮನೆಯ ಅಂಗಳದಲ್ಲಿಂದು ಅಯೋಗ್ಯ ಚಿತ್ರದ ಸ್ಟ್ಯಾಂಡೀಸ್ ಗಳದ್ದೇ ಸಡಗರ.

ಅರ್ಜುನ್ ಜನ್ಯ ಸಂಗೀತದ ಹಾಡುಗಳದ್ದೇ ರಿಂಗಣ. ಕಾರಣ, ಮಂಡ್ಯದ ಹುಡುಗ ನೀನಾಸಂ ಸತೀಶ್ ಅಭಿನಯದ ಅಯೋಗ್ಯ ಚಿತ್ರದ ಎರಡನೇ ಹಾಡು ಇಲ್ಲಿಯೇ ರಿಲೀಸ್ ಆಗಿದೆ. ಟಗರು ಚಿತ್ರದ ಟೈಟಲ್ ಟ್ರ್ಯಾಕ್ ಹಾಡಿದ್ದ ಅಂಥೋನಿ ದಾಸ್, ಅಯೋಗ್ಯನ ಶೀರ್ಷಿಕೆ ಹಾಡು ಹಾಡಿದ್ದಾರೆ. ಹಾಡನ್ನು ಬಿಡುಗಡೆ  ಮಾಡಿದ್ದ ಅಂಬಿ ಇಡೀ ಚಿತ್ರತಂಡಕ್ಕೆ ಹಾರೈಸಿದರು.

ಅಂಬಿ ಬಗ್ಗೆ ಮಾತನಾಡಿದ ನಟ ನೀನಾಸಂ ಸತೀಶ್, ಅಂಬರೀಶ್ ಒಬ್ರೇ ಮಂಡ್ಯ ಗಂಡು. ಬೇರೆ ಯಾರೂ ಇಲ್ಲ. ಅವರಂಥ ನಟ ಮತ್ತೊಬ್ಬರಿಲ್ಲ ಎಂದು ರೆಬಲ್ ಸ್ಟಾರ್ ಅವರನ್ನು ಗುಣಗಾನ ಮಾಡಿದರು.

loader