ಬೆಂಗಳೂರು[ಜು. 07]  ಬಿಜೆಪಿ ಸರ್ಕಾರ ರಚನೆ ಮಾಡಿದರೆ ನಮ್ಮ ಅಭ್ಯಂತರವಿಲ್ಲ. ನಮ್ಮ ಆಂತರಿಕ ಕಚ್ಚಾಟದಿಂದ ಹೀಗಾಗಿದೆ. ಅದಕ್ಕೆ ಬಿಜೆಪಿ ಅವರೇನು ಮಾಡ್ತಾರೆ ಅವರು ಸರ್ಕಾರ ರಚನೆ ಮಾಡಿದರೆ ನಮಗೆ ಅಭ್ಯಂತರವಿಲ್ಲ ಎಂದು ಕಾಂಗ್ರೆಸ್ ಅಮಾನತು ಶಾಸಕ ರೋಶನ್ ಬೇಗ್ ಹೇಳಿದ್ದಾರೆ.

ನಾನು ರಾಜೀನಾಮೆ ಕೊಡೋದಾದ್ರೆ ಹೇಳಿಯೇ ಕೊಡ್ತೀನಿ. ನನಗೆ ಅಸಮಾಧಾನ ಇರೋದು ನಿಜ. ರಾಮಲಿಂಗಾರೆಡ್ಡಿ ಅವರಿಗೇ ಪಕ್ಷದಲ್ಲಿ ಸ್ಥಾನ ಮಾನ ಇಲ್ಲ. ಇದಕ್ಕೆಲ್ಲ ಕಾರಣ ನಾನು ಅಂದು ಪ್ರಸ್ತಾಪ ಮಾಡಿದ್ದ ಹೆಸರುಗಳೇ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ಮೇಲೆ ವಾಗ್ದಾಳಿ ಮಾಡಿದರು.

ಮಲ್ಲಿಕಾರ್ಜುನ ಖರ್ಗೆ ಕರ್ನಾಟಕದ ಮುಖ್ಯಮಂತ್ರಿ?

ನಾನು ಅವತ್ತು ಸಿದ್ದರಾಮಯ್ಯ ವಿರುದ್ಧ ಮಾತಾಡಿದೆ ಅಂತ ಸಸ್ಪೆಂಡ್ ಮಾಡಿದ್ದರು. ಇಂದು ಮೈತ್ರಿ ಈ ಸ್ಥಿತಿ ತಲುಪಲು ಅವರೇ ಕಾರಣ ಎಂದು ರೋಶನ್ ಬೇಗ್ ಹೇಳಿದ್ದರು. ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದ ರೋಶನ್ ಬೇಗ್ ಅವರನ್ನು ಕಾಂಗ್ರೆಸ್ ಅಮಾನತು ಮಾಡಿತ್ತು.