ಮುಂಬೈ[ಜು. 14] ಮುಂಬೈನಲ್ಲಿ ಬೀಡು ಬಿಟ್ಟಿರುವ ಅತೃಪ್ತ ಶಾಸಕರು ಸುದ್ದಿಗೋಷ್ಠಿ ನಡೆಸಿ ದೋಸ್ತಿ ಸರಕಾರಕ್ಕೆ ನಮ್ಮ ಹತ್ತಿರ ಬರಬೇಡಿ ಬಾಗಿಲು ಮುಚ್ಚಿದೆ ಎಂಬ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.

ಶಾಸಕ  ಎಸ್. ಸಿ. ಸೋಮಶೇಖರ್ ಮಾತನಾಡಿ, ನಾವೆಲ್ಲರೂ ಒಟ್ಟಾಗಿದ್ದೇವೆ. ರಾಜೀನಾಮೆ ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ. ನಾವು 12 ಜನ ಒಟ್ಟಾಗಿದ್ದು ಸುಧಾಕರ್ ಸಹ ನಮ್ಮನ್ನು ಸೇರಿಕೊಳ್ಳಲಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಒಪ್ಪಿಕೊಂಡಿದ್ದ ಎಂಟಿಬಿ ಮತ್ತೆ ಮುಂಬೈ ವಿಮಾನ ಏರಲು 3 ಕಾರಣ

ನಾವು ಸ್ವ ಇಚ್ಛೆಯಿಂದ ಬಂದಿದ್ದು ನಮ್ಮನ್ನು ಯಾರೂ ಕರೆದುಕೊಂಡು ಬಂದಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಎಂಟಿಬಿ ಸಹ ಹೇಳಿ ಕಾಂಗ್ರೆಸ್ ನಾಯಕರು ಮಾಡಿದ್ದ ಆರೋಪಗಳಿಗೆ ತೆರೆ ಎಳೆಯುವ ಕೆಲಸ ಮಾಡಿದರು.