ತುಮಕೂರು[ಜು.14]: ಕಳೆದೆರಡು ವಾರದಿಂದ ನಡೆಯುತ್ತಿರುವ ರಾಜ್ಯ ರಾಜಕೀಯ ಪ್ರಹಸನ ಇಂದು ಭಾನುವಾರವೂ ಮುಂದುವರೆದಿದೆ. ಒಂದೆಡೆ ಸಿದ್ದರಾಮಯ್ಯ, ಡಿಕೆಶಿ ಮಾತಿಗೆ ಮರುಗದ ಎಂಟಿಬಿ ನಾಗರಾಜ್ ಮುಂಬೈ ವಿಮಾನ ಹಾರಿದ್ದರೆ, ಮತ್ತೊಂದೆಡೆ ಸರ್ಕಾರ ಉಳಿಸಿಕೊಳ್ಳಲು ಎಚ್. ಡಿ. ರೇವಣ್ಣ ಟೆಂಪಲ್ ರನ್ ನಡೆಸುತ್ತಿದ್ದಾರೆ. ದೋಸ್ತಿ ಸರ್ಕಾರ ಪತನಗೊಳ್ಳುವ ಲಕ್ಷಣಗಳು ದಟ್ಟವಾಗುತ್ತಿದ್ದು, ದೋಸ್ತಿ ಪಾಳಯದ್ಲಲಿ ಆತಂಕ ಮನೆ ಮಾಡಿದೆ. ಇಂತಹ ಪರಿಸ್ಥಿತಿ ನಡುವೆ ಸದ್ಯ ತುಮಕೂರಿನ ಕಾಂಗ್ರೆಸ್ ನಾಯಕ ಕೆ. ಎನ್. ರಾಜಣ್ಣ, ರೇವಣ್ಣ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

ತುಮಕೂರಿನಲ್ಲಿ ಲಕ್ಷ್ಮಣ ಸವದಿ ಭೇಟಿ ಬಳಿಕ ಪ್ರತಿಕ್ರಿಯಿಸಿರುವ ಕೆ.ಎನ್.ರಾಜಣ್ಣ 'ಅವ್ರು ರೇವಣ್ಣ ಅಲ್ಲಾ ರಾವಣ. ಹೆಸ್ರು ರಾವಣ ಅಂತಾ ಇಡ್ಬೇಕಿತ್ತು,ಅದ್ಯಾಕೋ ಅವ್ರಪ್ಪ ರೇವಣ್ಣ ಅಂತಾ ಇಟ್ಬಿಟ್ಟಿದ್ದಾರೆ‌‌‌‌. ಬಹುಮತ ಸಾಬೀತಿನ ಬಗ್ಗೆ ಸಾವಿತ್ರಮ್ಮ ಚೌಲ್ಟ್ರಿ ಹತ್ರ ಗಿಣಿ ಶಾಸ್ರ್ರ ಕೇಳಿ. ಸರ್ಕಾರದ ಈ ಸ್ಥಿತಿಗೆ ರೇವಣ್ಣ ಕಾರಣ. ರೇವಣ್ಣನ ಕಾಟಕ್ಕೆ‌ ಯಾರೂ ವಾಪಸ್ ಬರೋದಿಲ್ಲಾ’ ಎನ್ನುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.

ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲ ಕಲ್ಲೋಲ: ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ಲಕ್ಷ್ಮಣ ಸವದಿ ಭೇಟಿ ಕುತರಿತು ಪ್ರತಿಕ್ರಿಯಿಸಿದ ರಾಜಣ್ಣ 'ಲಕ್ಷ್ಮಣ ಸವದಿ,ನಾನು 25 ವರ್ಷಗಳ ಸ್ನೇಹಿತರು. ಕಾರ್ಯಕ್ರಮದ ನಿಮಿತ್ತ ತುಮಕೂರಿಗೆ ಬಂದು ನನ್ನನ್ನ ಭೇಟಿ ಮಾಡಿದ್ದಾರೆ. ಸೌಜನ್ಯಯುತ ಭೇಟಿಗೆ ಯಾವುದೇ ರಾಜಕೀಯ ಲೇಪನ ಬೇಡ. ಲಕ್ಷ್ಮಣ ಸವದಿ ನನ್ನನ್ನ ಬಿಜೆಪಿಗೆ‌ ಕರಿಲಿಲ್ಲಾ, ನಾನು ಅವ್ರನ್ನ ಕಾಂಗ್ರೆಸ್ ಗೆ ಕರೆದಿಲ್ಲಾ' ಎಂದಿದ್ದಾರೆ.

ಇದೇ ಸಂದರ್ಭದಲ್ಲಿ ಕುಮಾರಸ್ವಾಮಿ ನಡೆ ಕುರಿತಾಗಿ ಪ್ರತಿಕ್ರಿಯಿಸಿದ ಮಾಜಿ ಶಾಸಕ 'ರಾಜ್ಯದಲ್ಲಿ ಸರ್ಕಾರವೇ ಇಲ್ಲಾ. ಚುನಾವಣೆಯಲ್ಲಿ ನಿಲ್ಲೋ ಎಲ್ಲರೂ ಗೆಲ್ತೀವೆ ಅಂತಲೇ ಹೇಳೋದು, ಸೋಲ್ತೀವಿ ಅಂತಾ ಯಾರೂ ಹೇಳಲ್ಲ. ಫಲಿತಾಂಶ ಬಂದ್ಮೇಲೆ ಯಾರು ಸೋಲ್ತಾರೆ ಯಾರು ಗೆಲ್ತಾರೆ ಅಂತಾ ಗೊತ್ತಾಗೋದು. ನಮಗೆ ಯಾವತ್ತು ಸುಳ್ಳು ಹೇಳಿ ಅಭ್ಯಾಸ ಇಲ್ಲಾ, ನಿಜ ಹೇಳೋದಾದ್ರೇ ಸರ್ಕಾರವೇ ಇಲ್ಲಾ' ಎಂದಿದ್ದಾರೆ