ಮಾ. 9ರಂದು ಹಿರಿಯರ ಸಮ್ಮುಖ ಬಿಜೆಪಿ ಸೇರ್ಪಡೆಯಾಗುವುದಾಗಿಯೂ ಅವರು ತಿಳಿಸಿದರು.
ಭಟ್ಕಳ: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರ ಪುತ್ರ ಹಾಗೂ ಮಾಜಿ ಸಚಿವ ಎಸ್.ಕುಮಾರ ಬಂಗಾರಪ್ಪ ಕಾಂಗ್ರೆಸ್ ತ್ಯಜಿಸಿ, ಬಿಜೆಪಿ ಸೇರುವ ತಮ್ಮ ನಿರ್ಧಾರವನ್ನು ನಿನ್ನೆ ಅಧಿಕೃತವಾಗಿ ಪ್ರಕಟಿಸಿದ್ದಾರೆ. ಕಳೆದ 13 ವರ್ಷದಿಂದ ಅಧಿಕಾರದಿಂದ ದೂರವಿಟ್ಟ ಕಾಂಗ್ರೆಸ್ ನಾಯಕರ ಧೋರಣೆ, ಜಿಲ್ಲಾ ಕಾಂಗ್ರೆಸ್'ನ ಗೊಂದಲ ನಿವಾರಿಸುವಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ತೋರಿದ ನಿರ್ಲಕ್ಷ್ಯತನ ಹಾಗೂ ಸೊರಬ ಜೆಡಿಎಸ್ ಶಾಸಕರಿಗೆ ಕಾಂಗ್ರೆಸ್ ನಾಯಕತ್ವ ಮಣೆ ಹಾಕುತ್ತಿರುವುದರಿಂದ ಮನನೊಂದು ಕಾಂಗ್ರೆಸ್ ಪಕ್ಷ ತ್ಯಜಿಸುತ್ತಿರುವುದಾಗಿ ಘೋಷಿಸಿದರು. ಅಲ್ಲದೆ, ಮಾ. 9ರಂದು ಹಿರಿಯರ ಸಮ್ಮುಖ ಬಿಜೆಪಿ ಸೇರ್ಪಡೆಯಾಗುವುದಾಗಿಯೂ ಅವರು ತಿಳಿಸಿದರು.
ಕುಮಾರ್ ಬಂಗಾರಪ್ಪ ಕೊಟ್ಟ ಕಾರಣಗಳು:
1) 2004ರಿಂದಲೂ ಸತತವಾಗಿ ನನ್ನನ್ನು ಅಧಿಕಾರದಿಂದ ದೂರ ಉಳಿಸಲಾಗಿದೆ. ನನಗೆ ಯಾವುದೇ ಹುದ್ದೆ ನೀಡಲಿಲ್ಲ. ಈಡಿಗ ಸಮುದಾಯದ ನಿಕಟ ಸಂಪರ್ಕ, ನಾಯಕ ನಟನಾಗಿ ಜನಪ್ರಿಯತೆ, 3-4 ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಸಾಮರ್ಥ್ಯ ಇದ್ದರೂ ನನ್ನನ್ನು ನಿರ್ಲಕ್ಷಿಸಲಾಗಿದೆ.
2) ಸೊರಬ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ನನಗಿಂತ ಜೆಡಿಎಸ್ ಶಾಸಕ ಮಧು ಬಂಗಾರಪ್ಪ ಅವರ ಶಿಫಾರಸುಗಳಿಗೆ ಮನ್ನಣೆ ನೀಡುತ್ತಿದ್ದಾರೆ.
3) ಲೋಕಸಭೆ ಚುನಾವಣೆ ವೇಳೆ ಬಹುಸಂಖ್ಯಾತ ಸಮುದಾಯದ ದೀವರು(ಈಡಿಗ) ಅಭ್ಯರ್ಥಿಗೆ ಟಿಕೆಟ್ ನೀಡದೆ ಪಕ್ಕದ ಜಿಲ್ಲೆಯಿಂದ ಉದ್ಯಮಿಯನ್ನು ಕರೆತರಲಾಯಿತು.
(epaper.kannadaprabha.in)
