ಮುಂಬೈನ ಎಲ್ಫಿನ್‌ಸ್ಟೋನ್ ರಸ್ತೆಯ ರೈಲು ನಿಲ್ದಾಣದಲ್ಲಿ ಕಳೆದ ಶುಕ್ರವಾರ ಸಂಭವಿಸಿದ ಕಾಲ್ತುಳಿತದ ನೈಜ ಕಾರಣವನ್ನು ತನಿಖಾ ತಂಡಗಳು ಪತ್ತೆ ಮಾಡಿವೆ.
ಮುಂಬೈ: ಮುಂಬೈನ ಎಲ್ಫಿನ್ಸ್ಟೋನ್ ರಸ್ತೆಯ ರೈಲು ನಿಲ್ದಾಣದಲ್ಲಿ ಕಳೆದ ಶುಕ್ರವಾರ ಸಂಭವಿಸಿದ ಕಾಲ್ತುಳಿತದ ನೈಜ ಕಾರಣವನ್ನು ತನಿಖಾ ತಂಡಗಳು ಪತ್ತೆ ಮಾಡಿವೆ.
ಬ್ರಿಜ್ ಮೇಲೆ ಸಿಲುಕಿದ್ದ ಹೂವು ಮಾರಾಟಗಾರನೊಬ್ಬ ‘ಫೂಲ್ ಗಿರ್ ಗಯಾ’ (ಹೂವುಗಳು ಬಿದ್ದವು) ಎಂದು ಕೂಗಿಕೊಂಡ. ಇದನ್ನು ಜನರು ‘ಪೂಲ್ ಗಿರ್ ಗಯಾ’ (ಸೇತುವೆ ಕುಸಿಯಿತು) ಎಂದು ತಪ್ಪಾಗಿ ಅರ್ಥೈಸಿದ್ದೇ ಸೇತುವೆ ಕುಸಿತದ ವದಂತಿ ಹಬ್ಬಲು ಕಾರಣ ಆಯಿತು ಎಂದು ಪತ್ತೆ ಮಾಡಿದ್ದಾರೆ.
ಕಾಲ್ತುಳಿತದಲ್ಲಿ ಬದುಕುಳಿದ ಓರ್ವ ವಿದ್ಯಾರ್ಥಿಯು ಈ ಮಾಹಿತಿಯನ್ನು ರೈಲ್ವೆ ತನಿಖಾ ತಂಡಗಳಿಗೆ ನೀಡಿದ್ದಾನೆ. ಆದರೆ ಇದರ ಜತೆಗೆ ಇತರ ಕಾರಣಗಳ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ ಎಂದು ತನಿಖೆದಾರರು ಹೇಳಿದ್ದಾರೆ.
