ರಾಜ್ಯ  ಸರ್ಕಾರ ಈ ಎಲ್ಲಾ ಅವ್ಯವಸ್ಥೆಗಳ ಮಧ್ಯೆ ಇಂದಿರಾ ಕ್ಯಾಂಟಿನ್​​ ಯೋಜನೆಯ ಗುತ್ತಿಗೆಯನ್ನ ಉತ್ತರ ಪ್ರದೇಶ ಮೂಲದ ರಿರ್ಟಾನ್ಸ್​​  ಕಂಪನಿಗೆ  ನೀಡಿದೆ.  ಒಂದು ಊಟಕ್ಕೆ  ಗುತ್ತಿಗೆ ಪಡೆದ ಕಂಪನಿ  20 ರೂಪಾಯಿ ನಿಗದಿ ಪಡಿಸಿದೆ. 

ಬೆಂಗಳೂರು(ಆ.18):ರಾಜ್ಯ ಸರ್ಕಾರದ ಬಹುನೀರಿಕ್ಷಿತಾ ಯೋಜನೆ ಇಂದಿರಾ ಕ್ಯಾಂಟಿನ್​​ ಊಟ ತಿನ್ನೋದಕ್ಕೆ ಯೋಗ್ಯವಾ, ಸರ್ಕಾರ ನೀಡ್ತಿರೋ ಊಟದ ಗುಣಮಟ್ಟವನ್ನ ಬಿಬಿಎಂಪಿ ಅಧಿಕಾರಿಗಳೇ ಕಳಪೆ ಮಾಡ್ತಿದ್ದಿರಾ, ಸರ್ಕಾರ ನೀಡ್ತಿರೋ ಕಡಿಮೆ ದರ್ಜೆಯ ಊಟವನ್ನು ಬಿಬಿಎಂಪಿ ಅಧಿಕಾರಿಗಳು ಅರಮನೆ ಮೈದಾನದ ಬಯಲಲ್ಲಿ ತಯಾರು ಮಾಡಿರೋ ಅಗತ್ಯತೆಯಾದ್ರು ಏನು, ಈ ಬಗ್ಗೆ ಸುವರ್ಣ ನ್ಯೂಸ್​​ ರಿಯಾಲಿಟಿ ಚೆಕ್​ ನಡೆಸಿದೆ.

3 ದಿನಗಳ ಹಿಂದೆಯಷ್ಟೇ ರಾಜ್ಯ ಕಾಂಗ್ರೆಸ್​ ​ ಸರ್ಕಾರ ಬಹುನಿರೀಕ್ಷಿತ ಯೋಜನೆ ಇಂದಿರಾ ಕ್ಯಾಂಟಿನ್​​​ ಕಾರ್ಯಾರಂಭ ಮಾಡಿದೆ. ಹಸಿವು ಮುಕ್ತ ಕರ್ನಾಟಕ ಎಂಬ ಪರಿಕಲ್ಪನೆಯಲ್ಲಿ ಆರಂಭವಾಗಿರೋ ಈ ಯೋಜನೆಗೆ ಉತ್ತಮ ಪ್ರಶಂಸೆ ಕೂಡ ವ್ಯಕ್ತವಾಗುತ್ತಿದೆ. ಆದರೆ ಇಂದಿರಾ ಕ್ಯಾಂಟಿನ್​ಗೆ ಪೂರೈಕೆಯಾಗಬೇಕಿದ್ದ ಊಟವನ್ನ ನಗರದ ಅರಮನೆ ಮೈದಾನದ ಬಯಲಿನಲ್ಲಿ ತಯಾರು ಮಾಡ್ತಿರೋದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಸರ್ಕಾರದ ಈ ಅವ್ಯವಸ್ಥೆ ಯನ್ನು ಸುವರ್ಣ ನ್ಯೂಸ್​​ ರಿಯಾಲಿಟಿ ಚೆಕ್​ ಮೂಲಕ ಬಯಲು ಮಾಡಿದೆ.

ಬೆಂಗಳೂರಿನಲ್ಲಿ ಕಾರ್ಯರಂಭವಾಗಿರೋ ಇಂದಿರಾ ಕ್ಯಾಂಟಿನ್​ಗೆ 7 ಅಡುಗೆ ಮನೆಗಳಿಂದ ಊಟ ಪೂರೈಕೆಯಾಗಬೇಕಿತ್ತು. ಆದ್ರೆ ಯಾವುದೇ ತಯಾರಿಯಿಲ್ಲದ್ದೆ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟಿನ್​​ ಯೋಜನೆಯನ್ನ ತರಾತುರಿಯಲ್ಲಿ ಅನುಷ್ಠಾನಕ್ಕೆ ತಂದಿದೆ. ಸಾಲದ್ದಕ್ಕೆ ಅರಮನೆ ಮೈದಾನದ ಬಯಲಿನಲ್ಲಿ ತಯಾರು ಮಾಡಿದ ಊಟವನ್ನೇ ಬಿಬಿಎಂಪಿ ಅಧಿಕಾರಿಗಳು ಇಂದಿರಾ ಕ್ಯಾಂಟಿನ್​ಗೆ ಪೂರೈಕೆ ಮಾಡ್ತಿದ್ದಾರೆ. 

​ರಾಜ್ಯ ಸರ್ಕಾರ ಈ ಎಲ್ಲಾ ಅವ್ಯವಸ್ಥೆಗಳ ಮಧ್ಯೆ ಇಂದಿರಾ ಕ್ಯಾಂಟಿನ್​​ ಯೋಜನೆಯ ಗುತ್ತಿಗೆಯನ್ನ ಉತ್ತರ ಪ್ರದೇಶ ಮೂಲದ ರಿರ್ಟಾನ್ಸ್​​ ಕಂಪನಿಗೆ ನೀಡಿದೆ. ಒಂದು ಊಟಕ್ಕೆ ಗುತ್ತಿಗೆ ಪಡೆದ ಕಂಪನಿ 20 ರೂಪಾಯಿ ನಿಗದಿ ಪಡಿಸಿದೆ. ಸಾರ್ವಜನಿಕರಿಂದ 10 ರೂಪಾಯಿ ಮತ್ತು ಬಿಬಿಎಂಪಿ ಯಿಂದ 10 ರೂಪಾಯಿ ಹಣ ವಸೂಲಿ ಮಾಡುತ್ತಿದೆ. ಆದರೂ ಗುಣ ಮಟ್ಟದ ಊಟ ನೀಡುವಲ್ಲಿ ಎಡವುತ್ತಿದೆ ಅನ್ನಿಸುತ್ತಿದೆ ಒಟ್ಟಿನಲ್ಲಿ ಈ ಈ ಸಮಸ್ಯೆಗಳ ಮಧ್ಯೆ ಸಾರ್ವಜನಿಕರು ಇಂದಿರಾ ಕ್ಯಾಂಟಿನ್ ಊಟದ ಬಗ್ಗೆ ಆತಂಕಗೊಂಡಿರೋದಂತೂ ಅಕ್ಷರಶಃ ಸತ್ಯ .