ದೇಶದಲ್ಲಿ ಉದ್ಯಮಗಳನ್ನು ಆಕರ್ಷಿಸುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ ಈಗ 13ನೇ ಸ್ಥಾನ. ಅದೂ 9ನೇ ಸ್ಥಾನದಿಂದ 13ನೇ ಸ್ಥಾನಕ್ಕೆ ಕುಸಿದಿದೆ. ಇದನ್ನು ಬೆನ್ನು ಹತ್ತಿದ ಸುವರ್ಣ ನ್ಯೂಸ್, ಒಂದು ಎಕ್ಸ್​'ಕ್ಲೂಸಿವ್ ವರದಿಯನ್ನು ನಿಮ್ಮ ಮುಂದಿಡುತ್ತಿದೆ. ಅದು, ಇದೇ ವರ್ಷ ಫೆಬ್ರವರಿಯಲ್ಲಿ ನಡೆದ ಜಿಮ್ ಸಮ್ಮೇಳನದ ವರದಿ. ಇದು ಸರ್ಕಾರದ ಆಂತರಿಕ ವರದಿ. ಇದರ ಪ್ರಕಾರವೇ, ಸರ್ಕಾರ ಜಿಮ್​'ಗೆ ಖರ್ಚು ಮಾಡಿದ್ದು 39 ಕೋಟಿ. ಆದರೆ, ಇದುವರೆಗೆ ನಯಾಪೈಸೆ ಬಂದಿಲ್ಲ. ಫೆಬ್ರವರಿಯಲ್ಲಿ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್​'ನಲ್ಲಿ ಜಿಮ್ ಸಮಾವೇಶ ನಡೆದಿತ್ತು. ಜಿಮ್ ಎಂದರೆ, ಗ್ಲೋಬಲ್ ಇನ್​ವೆಸ್ಟರ್ಸ್ ಮೀಟ್. ಆ ಕಾರ್ಯಕ್ರಮದ ಮೂಲಕ ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸಿ, ಕರ್ನಾಟಕದಲ್ಲಿ ಬಂಡವಾಳ ಹೂಡಲು ಆಹ್ವಾನಿಸಿ, ಉದ್ಯೋಗ ಸೃಷ್ಟಿಸುವ ಯೋಜನೆ.

ಬೆಂಗಳೂರು(ಅ.02): ದೇಶದಲ್ಲಿ ಉದ್ಯಮಗಳನ್ನು ಆಕರ್ಷಿಸುತ್ತಿರುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕಕ್ಕೆ ಈಗ 13ನೇ ಸ್ಥಾನ. ಅದೂ 9ನೇ ಸ್ಥಾನದಿಂದ 13ನೇ ಸ್ಥಾನಕ್ಕೆ ಕುಸಿದಿದೆ. ಇದನ್ನು ಬೆನ್ನು ಹತ್ತಿದ ಸುವರ್ಣ ನ್ಯೂಸ್, ಒಂದು ಎಕ್ಸ್​'ಕ್ಲೂಸಿವ್ ವರದಿಯನ್ನು ನಿಮ್ಮ ಮುಂದಿಡುತ್ತಿದೆ. ಅದು, ಇದೇ ವರ್ಷ ಫೆಬ್ರವರಿಯಲ್ಲಿ ನಡೆದ ಜಿಮ್ ಸಮ್ಮೇಳನದ ವರದಿ. ಇದು ಸರ್ಕಾರದ ಆಂತರಿಕ ವರದಿ. ಇದರ ಪ್ರಕಾರವೇ, ಸರ್ಕಾರ ಜಿಮ್​'ಗೆ ಖರ್ಚು ಮಾಡಿದ್ದು 39 ಕೋಟಿ. ಆದರೆ, ಇದುವರೆಗೆ ನಯಾಪೈಸೆ ಬಂದಿಲ್ಲ.

ಫೆಬ್ರವರಿಯಲ್ಲಿ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್​'ನಲ್ಲಿ ಜಿಮ್ ಸಮಾವೇಶ ನಡೆದಿತ್ತು. ಜಿಮ್ ಎಂದರೆ, ಗ್ಲೋಬಲ್ ಇನ್​ವೆಸ್ಟರ್ಸ್ ಮೀಟ್. ಆ ಕಾರ್ಯಕ್ರಮದ ಮೂಲಕ ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸಿ, ಕರ್ನಾಟಕದಲ್ಲಿ ಬಂಡವಾಳ ಹೂಡಲು ಆಹ್ವಾನಿಸಿ, ಉದ್ಯೋಗ ಸೃಷ್ಟಿಸುವ ಯೋಜನೆ.

ಖರ್ಚಾಗಿದ್ದು 39 ಕೋಟಿ, ಬರಲಿಲ್ಲ ನಯಾಪೈಸೆ ಬಂಡವಾಳ

ಸುಮ್ಮನೆ ಈ ಲೆಕ್ಕ ನೋಡಿ. ಜಿಮ್​'ಗಾಗಿ ಸರ್ಕಾರ ಖರ್ಚು ಮಾಡಿದ್ದು 39 ಕೋಟಿ, 88 ಲಕ್ಷ. ಕೋಟಿಯ ಮಾತು ಬಿಡಿ, ನಯಾಪೈಸೆ ಬಂಡವಾಳವೂ ಬರಲಿಲ್ಲ. ಇದೇ ಜಿಮ್​'ನಲ್ಲಿ 13 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಯೋಜನೆಗೆ ಅನುಮೋದನೆ ಕೊಡಲಾಗಿತ್ತು. ಒಂದೇ ಒಂದು ಪೈಸೆಯೂ ಹೂಡಿಕೆಯಾಗಲಿಲ್ಲ. ಸಾವಿರಾರು ಉದ್ಯೋಗ ಸೃಷ್ಟಿ ಮಾಡುವ ಬಣ್ಣ ಬಣ್ಣದ ಭರವಸೆ ಕೊಡಲಾಗಿತ್ತು. ಹೂಡಿಕೆಯೇ ಆಗಲಿಲ್ಲ ಎಂದ ಮೇಲೆ ಉದ್ಯೋಗ ಸೃಷ್ಟಿಯ ಮಾತೆಲ್ಲಿ. ಒಂದು ಉದ್ಯೋಗವೂ ಸೃಷ್ಟಿಯಾಗಲಿಲ್ಲ.

ಇದು ಸುವರ್ಣ ನ್ಯೂಸ್'​ಗೆ ಸಿಕ್ಕಿರುವ ಎಕ್ಸ್​ಕ್ಲೂಸಿವ್ ರಿಪೋರ್ಟ್. ಇದು ಚರ್ಚೆಯಾಗಿರುವವುದು ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ. ಸರ್ಕಾರದ ಅತ್ಯಂತ ಆಂತರಿಕ ಮಟ್ಟದಲ್ಲಿ ಚರ್ಚೆಯಾಗಿರುವ ವಿಚಾರ. ಇದರ ಎಕ್ಸ್​ಕ್ಲೂಸಿವ್ ಡೀಟೈಲ್ಸ್ ಸುವರ್ಣ ನ್ಯೂಸ್​'ಗೆ ಸಿಕ್ಕಿದೆ. ಜಿಮ್ ವೈಫಲ್ಯದ ಕಥೆಯನ್ನು ಅಧಿಕಾರಿಗಳೇ ಬಾಯ್ಬಿಟ್ಟಿದ್ದಾರೆ.

ವಿದೇಶ ಯಾತ್ರೆಗೇ 30 ಲಕ್ಷ ಖರ್ಚು ಮಾಡಿದ್ದ ದೇಶಪಾಂಡೆ

ಈ ಜಿಮ್​ಗೋಸ್ಕರ ಸನ್ಮಾನ್ಯ ಕೈಗಾರಿಕೆ ಸಚಿವ ದೇಶಪಾಂಡೆ, ಐದಾರು ದೇಶಗಳಿಗೆ ಭೇಟಿ ಕೊಟ್ಟಿದ್ದರು. ಮೆಕ್ಸಿಕೋ, ಪೆರು, ದುಬೈ, ಸ್ಯಾನ್ ಫ್ರಾನ್ಸಿಸ್ಕೋ, ಚಿಕಾಗೋ, ಪ್ಯಾರಿಸ್, ಅಮೇರಿಕ, ಫ್ರಾನ್ಸ್ ದೇಶಗಳಲ್ಲಿ ಪ್ರವಾಸ ಮಾಡಿದ್ದರು. ಈ ಪ್ರವಾಸಕ್ಕಾಗಿಯೇ 30 ಲಕ್ಷ ಖರ್ಚಾಗಿತ್ತು. ಅಬುದಾಬಿ, ಚೀನಾ, ದುಬೈ, ಈಜಿಪ್ಟ್, ಯೂರೋಪ್, ಜಪಾನ್, ಲಂಡನ್, ನೆದರ್ ಲ್ಯಾಂಡ್, ಪೋಲೆಂಡ್, ದಕ್ಷಿಣಾ ಆಫ್ರಿಕಾ, ಯುಎಇ, ಅಮೇರಿಕದ ಕಂಪನಿಗಳು ಬಂಡವಾಳ ಹೂಡಿಕೆಗೆ ಪ್ರಸ್ತಾವನೆಯನ್ನೂ ಸಲ್ಲಿಸಿದ್ದವು. ಆದರೆ, ಇವುಗಳಲ್ಲಿ ಒಂದೇ ಒಂದು ನಯಾಪೈಸೆ ಯೋಜನೆಯೂ ಜಾರಿಗೆ ಬಂದಿಲ್ಲ.

ಎಲ್ಲವೂ ಯೋಜನೆಯಂತೆಯೇ ಆಗಿ ಬಿಟ್ಟಿದ್ದರೆ, ಐಷಾರಾಮಿ ರೆಸಾರ್ಟ್​ಗಳು, ವೈದ್ಯಕೀಯ ಶಿಕ್ಷಣ ಸಂಸ್ಥೆಗಳು, ಮೆಡಿಸಿನ್ ಕಂಪೆನಿಗಳು, ಆಸ್ಪತ್ರೆಗಳು, ಟೌನ್​ಶಿಪ್​ಗಳು, ಆಹಾರೋತ್ಪಾದನಾ ಕಂಪೆನಿಗಳು ಬಂದು ಇಷ್ಟೊತ್ತಿಗೆ ಕೆಲಸ ಶುರು ಮಾಡಬೇಕಿತ್ತು. ಆದರೆ ಒಬ್ಬರೂ ಬರಲಿಲ್ಲ.

ಕುಸಿಯಿತು ಕರ್ನಾಟಕದ ಸ್ಥಾನ

ಈ ಎಲ್ಲದರ ಫಲಿತಾಂಶ ಈಗ ಕಣ್ಣ ಮುಂದಿದೆ. ಕರ್ನಾಟಕ 9ನೇ ಸ್ಥಾನದಿಂದ 13ನೇ ಸ್ಥಾನಕ್ಕೆ ಕುಸಿದಿದೆ. ಆಂಧ್ರಪ್ರದೇಶ, ತೆಲಂಗಾಣ, ಗುಜರಾತ್​ಗಳು ಟಾಪ್ 3 ಸ್ಥಾನದಲ್ಲಿವೆ. ಇದು ಇದೊಂದು ಜಿಮ್ ಕಥೆಯಲ್ಲ. ಈ ಹಿಂದೆಯೂ ಸರ್ಕಾರ ಮೊದಲು ಅಂಗೈಯಲ್ಲಿ ಆಕಾಶ ತೋರಿಸಿ, ಆಮೇಲೆ ಕನ್ನಡಿಯಲ್ಲಿ ಚಂದಮಾಮನನ್ನು ತೋರಿಸಿತ್ತು. ಅಷ್ಟೋ ಇಷ್ಟೋ ಬಂಡವಾಳ ಬಂದಿತ್ತು. ಆದರೆ, ಈ ಬಾರಿ, ನಯಾಪೈಸೆಯೂ ಬಂದಿಲ್ಲ.

ವರದಿ: ಕಿರಣ್ ಹನಿಯಡ್ಕ