"ನಾವು ಬಂದ್'ಗಳಿಗೆ ಹೆಸರಾದವರು. ನಮ್ಮ ಸೈನಿಕರಿಗೆ ಬೆಂಬಲ ನೀಡಲು ಮತ್ತು ಚೀನಾಗೆ ಎಚ್ಚರಿಕೆ ನೀಡಲು ನಾವೆಲ್ಲರೂ ದೊಡ್ಡ ಸಂಖ್ಯೆಯಲ್ಲಿ ಬೀದಿಗೆ ಇಳಿದು ಭಾರತ್ ಬಂದ್ ಯಾಕೆ ಆಚರಿಸಬಾರದು ಎಂದು ರಿಯಲ್ ಸ್ಟಾರ್ ಕೇಳಿದ್ದಾರೆ.
ಬೆಂಗಳೂರು(ಜುಲೈ 20): ಚೀನಾ ವಿರುದ್ಧ ಭಾರತ್ ಬಂದ್ ನಡೆಸುವಂತೆ ರಿಯಲ್ ಸ್ಟಾರ್ ಉಪೇಂದ್ರ ದೇಶದ ಜನತೆಗೆ ಕರೆಕೊಟ್ಟಿದ್ದಾರೆ. ಸುಮ್ಮಸುಮ್ಮನೆ ಬಂದ್ ಮಾಡುತ್ತೇವೆ. ಚೀನಾ ವಿರುದ್ಧ ಜನರು ಬೀದಿಗೆ ಇಳಿದು ಭಾರತ್ ಬಂದ್ ಆಚರಿಸುಂತೆ ಎಂದು ಉಪ್ಪಿ ಟ್ವಿಟ್ಟರ್'ನಲ್ಲಿ ಸಲಹೆ ನೀಡಿದ್ದಾರೆ.
"ನಾವು ಬಂದ್'ಗಳಿಗೆ ಹೆಸರಾದವರು. ನಮ್ಮ ಸೈನಿಕರಿಗೆ ಬೆಂಬಲ ನೀಡಲು ಮತ್ತು ಚೀನಾಗೆ ಎಚ್ಚರಿಕೆ ನೀಡಲು ನಾವೆಲ್ಲರೂ ದೊಡ್ಡ ಸಂಖ್ಯೆಯಲ್ಲಿ ಬೀದಿಗೆ ಇಳಿದು ಭಾರತ್ ಬಂದ್ ಯಾಕೆ ಆಚರಿಸಬಾರದು ಎಂದು ರಿಯಲ್ ಸ್ಟಾರ್ ಕೇಳಿದ್ದಾರೆ.
ಸಿಕ್ಕಿಂ ಗಡಿಯಲ್ಲಿ ಭಾರತೀಯ ಸೈನಿಕರು ಚೀನಾದಿಂದ ಯುದ್ಧದ ಅಪಾಯದಲ್ಲಿದ್ದರೂ ದೇಶದ ಜನರು ಚಿಕ್ಕಪುಟ್ಟ ವಿಷಯಗಳಿಗೆ ಕಿತ್ತಾಟ ನಡೆಸುತ್ತಿದ್ದಾರೆಂದು ವಿಷಾದಿಸಿ ಉಪೇಂದ್ರ ಟ್ವೀಟ್ ಮಾಡಿದ್ದಾರೆ.
ದೇಶದಲ್ಲಿ ಜನರ ಧೋರಣೆ ಬಗ್ಗೆ ಬೇಸರ ವ್ಯಕ್ತಪಡಿಸಿದ ಉಪೇಂದ್ರ, ನಾವು ಆಳುವುದಕ್ಕಲ್ಲ, ಆಳಿಸಿಕೊಳ್ಳುವುದಕ್ಕೆ ಲಾಯಕ್ಕು ಎಂದು ಕಿಡಿಕಾರಿದರು. ಅಲ್ಲದೇ, ಇಸ್ರೇಲ್ ದೇಶದಿಂದ ಕಲಿಯುವುದು ಬಹಳಷ್ಟಿದೆ ಎಂದೂ ಉಪ್ಪಿ ಅಭಿಪ್ರಾಯಪಟ್ಟಿದ್ದಾರೆ.