ಚಿಕ್ಕವರು ಬೆಳಯಲಿ ಎಂಬುದೆ ನನ್ನ ಆಸೆ. ಅದಕ್ಕಾಗಿ ಕ್ಷೇತ್ರ ಬಿಟ್ಟು ಕೊಡಲು ತಯಾರಿದ್ದೇನೆ.
ಮಂಡ್ಯ(ನ.18): ರಮ್ಯಾ ಅವರು ಕೇಳಿದರೆ ಮಂಡ್ಯ ಕ್ಷೇತ್ರವನ್ನು ಬಿಟ್ಟಕೊಡಲು ಸಿದ್ದನಿದ್ದೇನೆ ಎಂದು ಮಾಜಿ ಸಚಿವ ಹಾಗೂ ಶಾಸಕ ಅಂಬರೀಷ್ ತಿಳಿಸಿದ್ದಾರೆ. ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆ ಕಾಮಗಾರಿ ಚಾಲನೆಗಾಗಿ ಮಂಡ್ಯಕ್ಕೆ ಆಗಮಿಸಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಚಿಕ್ಕವರು ಬೆಳಯಲಿ ಎಂಬುದೆ ನನ್ನ ಆಸೆ. ಅದಕ್ಕಾಗಿ ಕ್ಷೇತ್ರ ಬಿಟ್ಟು ಕೊಡಲು ತಯಾರಿದ್ದೇನೆ. ನಾನು ಬೆಳಗಾವಿ ಅಧಿವೇಶನದಲ್ಲಿ ಭಾಗವಹಿಸುವುದಿಲ್ಲ.ಅಧಿವೇಶನದಲ್ಲಿ ಇಲ್ಲದ ಚರ್ಚೆಗಳೆ ನಡೆಯುತ್ತವೆ ಈ ಕಾರಣದಿಂದ ನಾನು ಭಾಗವಹಿಸುವುದಿಲ್ಲ ಎಂದು ತಿಳಿಸಿದರು.
