ಬೆಂಗಳೂರು (ಸೆ,27): ವಿಶ್ವ ಭಾರತಿ ಹೌಸಿಂಗ್ ಸೊಸೈಟಿ ಹಾಗೂ ಜಂತಕಲ್‌ ಮೈನಿಂಗ್‌ ಗುತ್ತಿಗೆ ಪ್ರಕರಣದ ಮರು ವಿಚಾರಣೆಗೆ ಸುಪ್ರಿಂಕೋರ್ಟ್ ಆದೇಶ ನೀಡಿರುವ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಸುಪ್ರೀಂ ಕೋರ್ಟ್ ನನ್ನ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿರುವುದು ಹಾಗೂ ತನಿಖೆ ನಡೆಸಲು ಆದೇಶ ನೀಡಿರುವುದು ಆಧಾರ ರಹಿತ ಎಂದು ಹೇಳಿರುವ ಕುಮಾರಸ್ವಾಮಿ ತಾನು ಯಾವುದೇ ತನಿಖೆಗೆ ಸಿದ್ಧವಿರುವುದಾಗಿ ಹೇಳಿದ್ದಾರೆ.

ಕಾವೇರಿ ನೀರು ಹಂಚಿಕೆ ವಿಚಾರದ ಬಗ್ಗೆ ಮುಖ್ಯಮಂತ್ರಿಗಳು ಕರೆದಿರುವ ಸರ್ವ ಪಕ್ಷಗಳ ಸಭೆಯಲ್ಲಿ ಭಾಗವಹಿಸಿದ ಬಳಿಕ ಪ್ರತಿಕ್ರಿಯೆ ನೀಡುವುದಾಗಿ ಹೇಳಿದ್ದಾರೆ.

ವಿಶ್ವ ಭಾರತಿ ಹೌಸಿಂಗ್ ಸೊಸೈಟಿ ಮತ್ತು ಜಂತಕಲ್‌ ಮೈನಿಂಗ್‌ ಗುತ್ತಿಗೆ ಪ್ರಕರಣದ ಮರು ವಿಚಾರಣೆಗೆ ಸುಪ್ರಿಂಕೋರ್ಟ್ ಇಂದು ಆದೇಶ ನೀಡಿದೆ. ಜೊತೆಗೆ ಕ್ರಿಮಿನಲ್​ ವಿಚಾರಣೆ ಎದುರಿಸುವಂತೆಯೂ ಕುಮಾರಸ್ವಾಮಿಯವರಿಗೆ ತಾಕೀತು ಮಾಡಿದೆ. 

ಎಚ್​ಡಿಕೆ ದಂಪತಿ ವಿರುದ್ಧದ ಈ ಪ್ರಕರಣವನ್ನು ಹೈಕೋರ್ಟ್ ಈ ಹಿಂದೆ ರದ್ದುಪಡಿಸಿತ್ತು. ಕೆಳ ನ್ಯಾಯಾಲಯದ ಈ ಆದೇಶವನ್ನು ಸರ್ವೋಚ್ಚ ನ್ಯಾಯಾಲಯ ವಜಾಗೊಳಿಸಿದ್ದು, ಖುದ್ದು ಹಾಜರಾಗುವಂತೆ ಎಚ್'ಡಿಕೆ ದಂಪತಿಗೆ ಸೂಚಿಸಿದೆ.