ಮೊನ್ನೆ ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆಯ ಅಂಕಿ-ಅಂಶಗಳು ಬಹಿರಂಗವಾಗುತ್ತಿದಂತೆ ರಾಜಕೀಯ ಮುಖಂಡರು ತಮ್ಮದೇ ರೀತಿಯಲ್ಲಿ ಎಕ್ಸಿಟ್ ಪೋಲ್ ರೀಸಲ್ಟ್ ಅನ್ನು ವಿಮರ್ಶೆ ಮಾಡುತ್ತಿದ್ದಾರೆ. ಸೋಲಿನ ಮುನ್ಸೂಚೆನೆ ಕಂಡವರು ಹಾಗೂ ಗೆಲುವಿನ ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. ಆ ಕುರಿತ ಸಂಪೂರ್ಣ ವರದಿ.

ನವದೆಹಲಿ(ಮಾ.11): ಮೊನ್ನೆ ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆಯ ಅಂಕಿ-ಅಂಶಗಳು ಬಹಿರಂಗವಾಗುತ್ತಿದಂತೆ ರಾಜಕೀಯ ಮುಖಂಡರು ತಮ್ಮದೇ ರೀತಿಯಲ್ಲಿ ಎಕ್ಸಿಟ್ ಪೋಲ್ ರೀಸಲ್ಟ್ ಅನ್ನು ವಿಮರ್ಶೆ ಮಾಡುತ್ತಿದ್ದಾರೆ. ಸೋಲಿನ ಮುನ್ಸೂಚೆನೆ ಕಂಡವರು ಹಾಗೂ ಗೆಲುವಿನ ವಿಭಿನ್ನ ಪ್ರತಿಕ್ರಿಯೆ ನೀಡಿದ್ದಾರೆ. ಆ ಕುರಿತ ಸಂಪೂರ್ಣ ವರದಿ.

ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆ ಬಹಿರಂಗವಾಗಿದೆ. ಸಮೀಕ್ಷೆಗಳ ಫಲಿತಾಂಶದಿಂದ ಬಿಜೆಪಿ ನಾಯಕರು ಗೆಲ್ಲುವಿನ ಪತಾಕೆ ಹಾರಿಸಲು ಸಕಲ ಸಿದ್ಧತೆ ನಡೆಸಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕೇಂದ್ರ ಸಚಿವ ಮುಖ್ತಾರ್ ಅಬ್ಬಸ್ ನಖ್ವಿ ಸಮಾಜವಾದಿ ಪಕ್ಷಕ್ಕೆ ಟಾಂಗ್​ ನೀಡಿದ್ದರು.

ಚುನಾವಣೋತ್ತರ ಸಮೀಕ್ಷೆ ನೋಡಿದ ಉತ್ತರ ಪ್ರದೇಶದ ಸಿಎಂ ಅಖಿಲೇಶ್ ಯಾದವ್ ಬಿಜೆಪಿಯನ್ನು ಹೊರಗಿಟ್ಟು ಬಿಎಸ್‍ಪಿ ಜೊತೆಗಾದರೂ ಮೈತ್ರಿಗೆ ಸಿದ್ಧ ಅಂತ ಪ್ಲಾನ್​ ಮಾಡಿದ ಅಖಿಲೇಶ್ ಯಾದವ್ ಕನಸು ಕನಸಾಗಿ ಉಳಿದುಕೊಳ್ಳಲಿದೆ.

ಬಂದಿರುವ ಸಮೀಕ್ಷೆ ಸರಿಯಾಗಿಲ್ಲ. ಯಾವುದೇ ಆಧಾರವಿಲ್ಲ. ಹೀಗಾಗಿ ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷವೇ ಮತ್ತೆ ಅಧಿಕಾರಕ್ಕೆ ಬರುತ್ತದೆ ಅದರಲ್ಲಿ ಎರಡು ಮಾತಿಲ್ಲವೆಂದು ನುಡಿದ್ದರು. ಇನ್ನು ಉತ್ತರಾಖಂಡ್​ ಸಿಎಂ ಹರೀಶ್​ ರಾವತ್​ ಮಾತನಾಡಿ ಚುನಾವಣೋತ್ತರ ಸಮೀಕ್ಷೆ ಕೇವಲ ಚುನಾವಣೋತ್ತರ ಸಮೀಕ್ಷೆಯಾಗಿದೆ. ಇದು ಜನರ ಅಂತಿಮ ತೀರ್ಮಾನವಲ್ಲವೆಂದು ಸಮೀಕ್ಷೆಯನ್ನು ಅಲೆಗಳೆದ್ದರು.

ಇನ್ನು ರಾಹುಲ್​ಗಾಂಧಿ ಫಲಿತಾಂಶ ಪ್ರಕಟಗೊಂಡ ಬಳಿಕವೇ ನಾವು ಮಾತನಾಡುತ್ತೇವೆಂದು ರಾಹುಲ್​ ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸಿದ್ದರು. ಒಟ್ಟಿನಲ್ಲಿ ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿದೆ. ಮತ ಎಣಿಕೆಯಲ್ಲಿ ಯಾವ ಪಕ್ಷಕ್ಕೆ ಸಿಗುತ್ತೆ, ಯಾವ ರಾಜ್ಯದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎಂಬುವುದು ಸ್ಪಷ್ಟವಾಗಿ ನಾಳೆ ಗೊತ್ತಾಗಲಿದೆ.