ಕಾಂಗ್ರೆಸ್ ಎಂಎಲ್​​ಎ ಗೋವಿಂದರಾಜು ಅವರ ಡೈರಿಯಲ್ಲಿ ಬಯಲಾಗಿರುವ ಸ್ಫೋಟಕ ಸತ್ಯದ ಕುರಿತಂತೆ ರಾಜ್ಯಸಭಾ ಸದಸ್ಯ, ರಾಜೀವ್ ಚಂದ್ರಶೇಖರ್ ಪತ್ರದ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು(ಫೆ.24): ಕಾಂಗ್ರೆಸ್ ಎಂಎಲ್​​ಎ ಗೋವಿಂದರಾಜು ಅವರ ಡೈರಿಯಲ್ಲಿ ಬಯಲಾಗಿರುವ ಸ್ಫೋಟಕ ಸತ್ಯದ ಕುರಿತಂತೆ ರಾಜ್ಯಸಭಾ ಸದಸ್ಯ, ರಾಜೀವ್ ಚಂದ್ರಶೇಖರ್ ಪತ್ರದ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ನಾನು ಅಂದೇ ಹೇಳಿದ್ದೆ, ಸ್ಟೀಲ್ ಫ್ಲೈಓವರ್ ಪ್ರಾಜೆಕ್ಟ್ ಭ್ರಷ್ಟಾಚಾರದಿಂದ ಕೂಡಿರುವ ಯೋಜನೆ ಎಂದು. ಇಂದು ಆ ಮಾತು ನಿಜವಾಗಿದೆ. ತಮ್ಮ ಡೈರಿಯಲ್ಲಿ ಸರ್ಕಾರ ಮಾಡಿರುವ ದೇಣಿಗೆ ಹಗರಣಗಳನ್ನು ಬರೆದಿಟ್ಟು, ಇಂದು ಸತ್ಯ ಬಹಿರಂಗಗೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ. ಈಗಾಗಲೇ ನಮ್ಮ ಕಣ್ಮುಂದೆ ಜಯಚಂದ್ರ, ಚಿಕ್ಕರಾಯಪ್ಪ, ಜಾರಕಿಹೋಳಿ, ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಎಂ.ಟಿ.ನಾಗರಾಜ್​​ರಂತ ಭ್ರಷ್ಟ ನಾಯಕರ ಮುಖವಾಡವನ್ನ ತೆರಿಗೆ ಇಲಾಖೆ ಹೊರಗೆಳೆದಿತ್ತು. ಅದನ್ನ ಸಾಭೀತುಪಡಿಸುವ ಸಾಕಷ್ಟು ಸಾಕ್ಷಿಗಳು ಕೂಡ ಇವೆ' ಎಂದು ತಮ್ಮ ಪತ್ರದಲ್ಲಿ ರಾಜೀವ್ ಚಂದ್ರಶೇಖರ್ ಉಲ್ಲೇಖಿಸಿದ್ದಾರೆ.