ಕಚೇರಿಗೆ 9 ಗಂಟೆ ಒಳಗೆ ಆಗಮಿಸಬೇಕು.ಇಲ್ಲವಾದಲ್ಲಿ ವೇತನ ಕಟ್ ಆಗಲಿದೆ. ಹೀಗೆಂದು ಮುಖ್ಯಮಂತ್ರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಲಖನೌ [ಜೂ.29] : ಕಚೇರಿಯಲ್ಲಿ ಆಲಸ್ಯ, ನಿರಾಸಕ್ತಿ ಮತ್ತು ತಡವಾಗಿ ಬರುವ ಸರ್ಕಾರಿ ನೌಕರರಿಗೆ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಖಡಕ್ ಎಚ್ಚರಿಕೆ ನೀಡಿದ್ದಾರೆ! ಸರ್ಕಾರಿ ನೌಕರರ ಮೇಲೆ ಹದ್ದಿನಕಣ್ಣು ನೆಟ್ಟಿರುವ ಸಿಎಂ ಯೋಗಿ ಕಚೇರಿ ಇದೀಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಳಗ್ಗೆ 9 ಗಂಟೆಗೆ ಕಚೇರಿಯಲ್ಲಿ ಹಾಜರಿರಲು ಆದೇಶಿಸಲಾಗಿದ್ದು, ತಡವಾಗಿ ಬಂದರೆ ಶಿಸ್ತು ಕ್ರಮದ ಜೊತೆಗೆ ವೇತನಕ್ಕೂ ಕತ್ತರಿ ಹಾಕುವುದಾಗಿ ಎಚ್ಚರಿಸಿದೆ. 

ಅಲ್ಲದೆ, ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳು ಮತ್ತು ಪೊಲೀಸ್ ಮುಖ್ಯಸ್ಥರು ಬೆಳಗ್ಗೆ 9 ರಿಂದ 11 ಗಂಟೆ ತನಕ ಕಡ್ಡಾಯವಾಗಿ ಸಾರ್ವಜನಿಕರ ಭೇಟಿಗೆ ಮೀಸಲಿಡಬೇಕೆಂದು ಆದೇಶಿಸಲಾಗಿದೆ.