. ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಮೊದಲ ಸ್ಥಾನ ಪಡೆದಿದ್ದಾರೆ.

ನವದೆಹಲಿ(ಏ.17): ದೇಶದ ಪ್ರಭಾವಿ 50 ವ್ಯಕ್ತಿಗಳ ಪಟ್ಟಿಯನ್ನು ಇಂಡಿಯಾ ಟುಡೇ ಸುದ್ದಿಸಂಸ್ಥೆ ಪ್ರಕಟಿಸಿದ್ದು, ಕರ್ನಾಟಕದ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅವರು 41ನೇ ಸ್ಥಾನ ಪಡೆದಿದ್ದಾರೆ. ರಿಲಯನ್ಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಮೊದಲ ಸ್ಥಾನ ಪಡೆದಿದ್ದು, ಟಾಟಾ ಗ್ರೂಪ್‌ನ ಮಾಜಿ ಮುಖ್ಯಸ್ಥ ರತನ್‌ ಟಾಟಾ ಎರಡನೇ ಮತ್ತು ಆದಿತ್ಯ ಬಿರ್ಲಾ ಗ್ರೂಪ್‌ನ ಮುಖ್ಯಸ್ಥ ಕೆ.ಎಂ.ಬಿರ್ಲಾ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.