ಸಂಸದರ ಪರವಾಗಿ ಎಎನ್ಒಪಿಎಲ್ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರು ಹಾಗೂ ಪ್ರಕಟಕರಾದ ಸಂಜಯ್ ಪ್ರಭು ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚೆಕ್ ವಿತರಿಸಿದರು.
ಬೆಂಗಳೂರು(ಡಿ.2): ‘ಮಾಸ್ತಿಗುಡಿ’ ಚಿತ್ರೀಕರಣ ವೇಳೆ ಮೃತಪಟ್ಟಿದ್ದ ಖಳ ನಟರಾದ ಉದಯ್ ಹಾಗೂ ಅನಿಲ್ ಕುಟುಂಬಕ್ಕೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ತಲಾ 5 ಲಕ್ಷ ರೂ. ನೆರವು ನೀಡಿದ್ದಾರೆ. ಸಂಸದರ ಪರವಾಗಿ ಎಎನ್ಒಪಿಎಲ್ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರು ಹಾಗೂ ಪ್ರಕಟಕರಾದ ಸಂಜಯ್ ಪ್ರಭು ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಚೆಕ್ ವಿತರಿಸಿದರು. ಈ ಸಂದರ್ಭದಲ್ಲಿ ಹಿರಿಯ ನಟರಾದ ಅಂಬರೀಶ್,ದೊಡ್ಡಣ ಹಾಗೂ ನಿರ್ಮಾಪಕರಾದ ಸಾ.ರಾ. ಗೋವಿಂದು, ರಾಕ್'ಲೈನ್ ವೆಂಕಟೇಶ್ ಉಪಸ್ಥಿತರಿದ್ದರು.
