ನವದೆಹಲಿ (ಫೆ.08): ಉಳಿತಾಯ ಖಾತೆದಾರರು ಫೆ. 20 ರಿಂದ  50 ಸಾವಿರಗಳನ್ನು ವಾರಕ್ಕೆ ವಿತ್ ಡ್ರಾ ಮಾಡಬಹುದು ಎಂದು ಆರ್ ಬಿಐ ಹೇಳಿದೆ.

 ವಾರದ ವಿತ್ ಡ್ರಾ ಮಿತಿ 24 ಸಾವಿರ ಇರುವುದನ್ನು ಫೆ. 20 ರಿಂದ 50 ಸಾವಿರಗಳಿಗೆ ಏರಿಸುವುದಾಗಿ ಆರ್ ಬಿಐ ಘೋಷಿಸಿದೆ. ಮಾರ್ಚ್ 13 ರಿಂದ ಯಾವುದೇ ವಿತ್ ಡ್ರಾ ಮಿತಿಯಿರುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ನ.08 ರಂದು ನೋಟು ನಿಷೇಧ ಘೋಷಣೆಯಾದಾಗಿನಿಂದ ಸಾಕಷ್ಟು ಬಾರಿ ವಿತ್ ಡ್ರಾ ಮಿತಿಯನ್ನು ಆರ್ ಬಿಐ ಬದಲಾಯಿಸಿತ್ತು. ಹೊಸ ಹೊಸ ಕಾನೂನುಗಳನ್ನು ಜಾರಿಗೊಳಿಸಿತ್ತು.