ಬಿಟ್ ಕಾಯಿನ್ ನಂತಹ ಡಿಜಿಟಲ್ ಕರೆನ್ಸಿಗೆ ದೇಶದಲ್ಲಿ ಚಲಾವಣೆಗೆ ಅವಕಾಶ ಇಲ್ಲ ಎಂದು ಹಲವು ಬಾರಿ ಸ್ಪಷ್ಟನೆ ನೀಡಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಶೀಘ್ರದಲ್ಲೇ ತನ್ನ ದೇ ಆದ ಡಿಜಿಟಲ್ ಕರೆನ್ಸಿ ಜಾರಿಗೊಳಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.

ಮುಂಬೈ: ಬಿಟ್ ಕಾಯಿನ್ ನಂತಹ ಡಿಜಿಟಲ್ ಕರೆನ್ಸಿಗೆ ದೇಶದಲ್ಲಿ ಚಲಾವಣೆಗೆ ಅವಕಾಶ ಇಲ್ಲ ಎಂದು ಹಲವು ಬಾರಿ ಸ್ಪಷ್ಟನೆ ನೀಡಿರುವ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ಶೀಘ್ರದಲ್ಲೇ ತನ್ನ ದೇ ಆದ ಡಿಜಿಟಲ್ ಕರೆನ್ಸಿ ಜಾರಿಗೊಳಿಸುವ ಬಗ್ಗೆ ಗಂಭೀರ ಚಿಂತನೆ ನಡೆಸಿದೆ.

ಇಂಥದ್ದೊಂದು ಡಿಜಿಟಲ್ ಕರೆನ್ಸಿ ಬಿಡುಗಡೆಯ ಸಾಧ್ಯಾಸಾಧ್ಯತೆ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡಲು ಆರ್ ಬಿಐ, ಅಂತರ್ ಇಲಾಖಾ ಮಟ್ಟದ ತಂಡವೊಂದನ್ನು ರಚಿಸಿದೆ. ಈ ತಂಡಕ್ಕೆ ಜೂನ್ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ‘ಡಿಜಿಟಲ್ ಕರೆನ್ಸಿ ಜಾರಿ ಕುರಿತು ಕೇಂದ್ರೀಯ ಬ್ಯಾಂಕ್ ಗಳು ಚರ್ಚಿಸುತ್ತಿವೆ. ಈ ಕರೆನ್ಸಿ, ಖಾಸಗಿ ಕಂಪನಿಗಳು ವಿತರಿಸುವ ಕರೆನ್ಸಿಗೆ ಹೊರತಾಗಿ ರಲಿದ್ದು, ಸ್ವತಃ ಇವುಗಳನ್ನು ಕೇಂದ್ರೀಯ ಬ್ಯಾಂಕ್ ಬಿಡುಗಡೆಗೊಳಿಸಲಿದೆ.

ಡಿಜಿಟಲ್‌ ಕರೆನ್ಸಿ ವಿತರಕರಜೊತೆ ಸಂಬಂಧ ಕಡಿತಕ್ಕೆಬ್ಯಾಂಕ್‌ಗಳಿಗೆ ಗಡುವು

ಮುಂಬೈ: ಬಿಟ್‌ ಕಾಯಿನ್‌ನಂತಹ ವರ್ಚುವಲ್‌ ಕರೆನ್ಸಿಗಳ ಬಳಕೆ ತಡೆಯುವ ನಿಟ್ಟಿನಲ್ಲಿ, ಇಂಥ ಡಿಜಿಟಲ್‌ ಕರೆನ್ಸಿ ವಿತರಿಸುವ ಸಂಸ್ಥೆಗಳ ಜೊತೆಗಿನ ಎಲ್ಲಾ ನಂಟು ಕಡಿದುಕೊಳ್ಳುವಂತೆ ಬ್ಯಾಂಕ್‌ಗಳಿಗೆ ಆರ್‌ಬಿಐ ಸೂಚಿಸಿದೆ. ಇಂಥ ಸಂಸ್ಥೆಗಳಿಗೆ ಬ್ಯಾಂಕ್‌ಗಳು ಯಾವುದೇ ಸೇವೆ ನೀಡಬಾರದು.

ಒಂದು ವೇಳೆ ಯಾವುದೇ ನಂಟು ಹೊಂದಿದ್ದರೆ ಅದನ್ನು 3 ತಿಂಗಳಲ್ಲಿ ಕಡಿತಗೊಳಿಸಬೇಕು ಎಂದು ಹೇಳಿದೆ. ಈ ಕ್ರಮಗಳು ವರ್ಚುವಲ್‌ ಕರೆನ್ಸಿಗಳಲ್ಲಿ ಸಾರ್ವಜನಿಕರು ಹೂಡಿಕೆ ಮಾಡುವುದನ್ನು ತಡೆಯಲು ಅನುವು ಮಾಡಿಕೊಡಲಿದೆ. ಜೊತೆಗೆ ಜನರನ್ನು ವಂಚನೆಯಿಂದ ಬಚಾವ್‌ ಮಾಡಲಿದೆ ಎಂದು ಆರ್‌ಬಿಐ ಹೇಳಿದೆ.