ಆರ್’ಬಿಐ ಶೀಘ್ರದಲ್ಲಿಯೇ 50 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲಿದ್ದು, ನೋಟಿನಲ್ಲಿ ಹಂಪಿಯ ರಥ ರಾರಾಜಿಸಲಿದೆ.  

ನವದೆಹಲಿ (ಆ.18): ಆರ್’ಬಿಐ ಶೀಘ್ರದಲ್ಲಿಯೇ 50 ರೂ ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲಿದ್ದು, ನೋಟಿನಲ್ಲಿ ಹಂಪಿಯ ರಥ ರಾರಾಜಿಸಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

50 ರೂ ಮುಖಬೆಲೆಯ ಹೊಸ ನೋಟುಗಳಲ್ಲಿ ನಮ್ಮ ಸಾಂಸ್ಕೃತಿಕ ವೈಭವವನ್ನು ಮೆರೆಸುವ ಹಂಪಿಯ ರಥ ರಾರಾಜಿಸಲಿದೆ. ನೋಟು ನೀಲಿ ಬಣ್ಣದ್ದಾಗಿದ್ದು, ನೂತನ ವಿನ್ಯಾಸವನ್ನು ಹೊಂದಿದೆ.

ನೋಟುಗಳು 66*135 ಮಿಮೀ ಉದ್ದದ್ದಾಗಿದ್ದು, ಮಧ್ಯದಲ್ಲಿ ಗಾಂಧೀಜಿ ಭಾವಚಿತ್ರವನ್ನು ಹಾಕಲಾಗಿದೆ. ಸ್ವಚ್ಛ ಭಾರತದ ಘೋಷಣೆಯೊಂದಿಗೆ, ಲೋಗೋವನ್ನು ನೋಟಿನಲ್ಲಿ ನೋಡಬಹುದಾಗಿದೆ. ನೋಟಿನ ಹಿಂಭಾಗದಲ್ಲಿ ಹಂಪಿ ರಥದ ಭಾವಚಿತ್ರವಿದೆ. ಇದೇ ನೋಟಿನ ಪ್ರಮುಖ ಆಕರ್ಷಣೆಯಾಗಿದೆ.