'ಆದಾಯ ತೆರಿಗೆ ದಾಳಿ ಆಗಿದ್ದು 2015ರಲ್ಲಿ, ಈಗಾಗಲೇ ಕೇಸ್ ಮುಗಿದು ಹೋಗಿದೆ. ಸುಮ್ಮನೆ ಈ ಪ್ರಕರಣವನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿದ್ದಾರೆ.'

ಕೊಪ್ಪಳ (ಫೆ.24): ಕಪ್ಪ ಡೈರಿ ಬಗ್ಗೆ ಕೊಪ್ಪಳದಲ್ಲಿ ಪ್ರತಿಕ್ರಿಯೆ ನೀಡಿರುವ ಬಸವರಾಜ ರಾಯರೆಡ್ಡಿ, ಬಿಡುಗಡೆಯಾಗಿರೋ ಡೈರಿಯಲ್ಲಿರೋ ಕೈಬರಹ ಗೋವಿಂದರಾಜ್ ಅವರದ್ದಾಗಿದ್ದರೇ ಅವರನ್ನು ಬಂಧಿಸಲಿ, ಆ ಬಗ್ಗೆ ಸಿ.ಬಿ.ಐ ತನಿಖೆ ನಡೆಸಲಿ ಎಂದಿದ್ದಾರೆ.

ಆದಾಯ ತೆರಿಗೆ ದಾಳಿ ಆಗಿದ್ದು 2015ರಲ್ಲಿ, ಈಗಾಗಲೇ ಕೇಸ್ ಮುಗಿದು ಹೋಗಿದೆ. ಸುಮ್ಮನೆ ಈ ಪ್ರಕರಣವನ್ನು ರಾಜಕೀಯ ಕೆಸರೆರಚಾಟಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ಬೇಕಂತಲೆ ಕಾಂಗ್ರೆಸ್​ ಮುಖಂಡರ ಮನೆಗಳ ಮೇಲೆ ಐ.ಟಿ.ರೈಡ್ ಮಾಡಿಸುತ್ತಿದೆ ಎಂದು ರಾಯರೆಡ್ಡಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದರು.