Asianet Suvarna News Asianet Suvarna News

ಪಾಕ್ ಪ್ರಜೆಗಳ ವಿಚಾರಣೆಗೆ ಬೆಂಗಳೂರಿನಲ್ಲಿ ರಾ ತಂಡ

ರಿಸರ್ಚ್ & ಅನಲಿಸಿಸ್ ವಿಂಗ್ (RAW) ಅಧಿಕಾರಿಗಳ ತಂಡ ವಿಚಾರಣೆಗಾಗಿ ಬೆಂಗಳೂರಿಗೆ ಬಂದಿದೆ. ಇದೇ ವೇಳೆ ಪಾಕ್​ ಪ್ರಜೆಗಳು ದೇಶಕ್ಕೆ ನುಸುಳಿದ್ದು ಹೇಗೆ ಎಂಬ ಮಾಹಿತಿ ಕಲೆ ಹಾಕಲಿದೆ.

RAW Officers in Bengaluru to Probe Pak Citizens

ಬೆಂಗಳೂರು: ಇತ್ತೀಚಿಗಷ್ಟೆ ಬೆಂಗಳೂರಿನಲ್ಲಿ ಬಂಧಿಸಲಾಗಿದ್ದ ಮೂವರು ಪಾಕಿಸ್ತಾನದ ಪ್ರಜೆಗಳ ತನಿಖೆ ಚುರುಕುಗೊಂಡಿದೆ.

ಇದೀಗ ರಿಸರ್ಚ್ & ಅನಲಿಸಿಸ್ ವಿಂಗ್ (RAW) ಅಧಿಕಾರಿಗಳ ತಂಡ ವಿಚಾರಣೆಗಾಗಿ ಬೆಂಗಳೂರಿಗೆ ಬಂದಿದೆ. ಇದೇ ವೇಳೆ ಪಾಕ್​ ಪ್ರಜೆಗಳು ದೇಶಕ್ಕೆ ನುಸುಳಿದ್ದು ಹೇಗೆ ಎಂಬ ಮಾಹಿತಿ ಕಲೆ ಹಾಕಲಿದೆ.

ಉಗ್ರರ ಸಹಾಯ ಪಡೆದು ಭಾರತ-ನೇಪಾಳ ಗಡಿ ದಾಟಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಅಧಿಕಾರಿಗಳು, ಮುಂದಿನ ದಿನಗಳಲ್ಲಿ ಸ್ಲೀಪರ್ ಸೆಲ್’ಗಳಾಗಿ ಕೆಲಸ ಮಾಡಬಹುದಾದ ಸಾಧ್ಯತೆಗಳ ಬಗ್ಗೆ ಅನುಮಾನ ಹೊಂದಿದ್ದಾರೆ.

ಆರೋಪಿಗಳು 9 ತಿಂಗಳಲ್ಲಿ 18 ಮಂದಿಯ ಜತೆ ಸಂಪರ್ಕ ಮಾಡಿದ್ದಾರೆ. ಪಾಕಿಸ್ತಾನದ 25ಕ್ಕೂ ಅಧಿಕ ಜನರ ಜೊತೆ ನಿರಂತರ ಸಂಪರ್ಕ ಹೊಂದಿದ್ದರು ಎಂದು ಹೇಳಲಾಗಿದೆ. ಬಂಧಿತರು ಸದ್ಯ ಸಿಸಿಬಿ ಪೋಲೀಸರ ವಶದಲ್ಲಿದ್ದಾರೆ.

Follow Us:
Download App:
  • android
  • ios